ನನ್ನನ್ನು ಅಣ್ಣ, ಅಂಕಲ್ ಅಂತೆಲ್ಲಾ ಕರೆಯಬೇಡಿ, ಕ್ಯಾಬ್ ಡ್ರೈವರ್ ನೋವಿನ ಮಾತಿದು..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾನ್ಯವಾಗಿ ಕ್ಯಾಬ್ ಹತ್ತಿದ ತಕ್ಷಣ ಡ್ರೈವರ್ ಅವರನ್ನು ಅಣ್ಣ ಒಟಿಪಿ ಎಂದು ಹೇಳೋದು ಅಭ್ಯಾಸ. ಆದರೆ ಎಲ್ಲರಿಗೂ ಇದು ಇಷ್ಟವಾಗುತ್ತದೋ ಇಲ್ಲವೋ, ತಿಳಿದುಕೊಳ್ಳುವಷ್ಟು ಸಮಯ ಎಲ್ಲಿದೆ.
ಇದೇ ಕಾರಣಕ್ಕೆ ಡ್ರೈವರ್ ಉಬರ್ ಡ್ರೈವರ್ ಒಬ್ಬರು ನನ್ನನ್ನು ಅಣ್ಣಾ,ಅಂಕಲ್ ಎಂದು ಕರೆಯಬೇಡಿ ಎಂದು ಕಾರ್ ಸೀಟ್ ಮೇಲೆ ಬರೆಸಿಬಿಟ್ಟಿದ್ದಾರೆ.

ಈ ಪೋಸ್ಟ್ ಎಲ್ಲೆಡೆ ವೈರಲ್ ಆಗಿದ್ದು, ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೆಲವರು ಡ್ರೈವರ್ ಬರೆದದ್ದು ಸರಿಯಾಗಿದೆ, ಸರ್ ಎಂದೋ ಅಥವಾ ಅವರ ಹೆಸರನ್ನೇ ಕರೆಯಬಹುದು, ಯಾರು ಯಾರದ್ದೂ ಅಣ್ಣ, ಅಂಕಲ್ ಆಗೋಕೆ ಹೇಗೆ ಸಾಧ್ಯ ಎಂದಿದ್ದಾರೆ. ಇನ್ನ ಕೆಲವರು ಗೌರವ ನೀಡಬೇಕೆಂದೇ ಅಣ್ಣ ಅಥವಾ ಅಂಕಲ್ ಎಂದು ಕರೆಯುತ್ತೇವೆ ಇದರಲ್ಲಿ ತಪ್ಪೇನು ಎಂದಿದ್ದಾರೆ.

ಒಟ್ಟಾರೆ ಮುಂದಿನ ಬಾರಿ ಕ್ಯಾಬ್ ಹತ್ತಿದಾಗ ನಿಮ್ಮನ್ನು ಏನೆಂದು ಕರೆಯಬೇಕು ನೀವೇ ಹೇಳಿ ಎಂದು ಕೇಳುವುದು ವಾಸಿ ಅಂತಿದ್ದಾರೆ ಗ್ರಾಹಕರು!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!