ಮದ್ಯಪಾನ ಮಾಡುವಾಗ ಜನರು ತಿಂಡಿ ಸೇರಿದಂತೆ ವಿವಿಧ ಆಹಾರಗಳನ್ನು ತಿನ್ನಲು ಇಷ್ಟಪಡುತ್ತಾರೆ. ಸೌತೆಕಾಯಿಯಂತಹ ಹುಳಿ ಮತ್ತು ಉಪ್ಪು ಆಹಾರಗಳ ಬಳಕೆಯನ್ನು ಹೆಚ್ಚಿಸುವುದು. ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ. ಅದ್ರ ಜೊತೆಗೆ ಕೆಲವು ಆಹಾರಗಳನ್ನು ತಿನ್ನುವುದರಿಂದ ಮತ್ತಷ್ಟು ತೊಂದರೆಗಳು ಉಂಟಾಗಬಹುದು.
ಆಲ್ಕೋಹಾಲ್ ಜೊತೆಗೆ ಒಣಗಿದ ಹಣ್ಣುಗಳು, ಬಾದಾಮಿ ಮತ್ತು ಪಿಸ್ತಾಗಳನ್ನು ಸೇವಿಸುವುದನ್ನು ತಪ್ಪಿಸಿ. ಇದು ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಗೋಡಂಬಿಯಲ್ಲಿ ಹೆಚ್ಚಿನ ಕೊಬ್ಬಿನಂಶವಿದೆ. ಆಲ್ಕೊಹಾಲ್ ಜೊತೆಗೆ ಸೇವಿಸುವುದರಿಂದ ನಿಮ್ಮ ಆರೋಗ್ಯವು ಹದಗೆಡುತ್ತದೆ.
ತಂಪು ಅಥವಾ ಕಾರ್ಬೊನೇಟೆಡ್ ಪಾನೀಯಗಳೊಂದಿಗೆ ಆಲ್ಕೋಹಾಲ್ ಮಿಶ್ರಣ ಮಾಡುವುದು ಖಂಡಿತವಾಗಿಯೂ ಅಪಾಯಕಾರಿ. ಆಲ್ಕೋಹಾಲ್ ಜೊತೆಗೆ ತಂಪು ಪಾನೀಯಗಳನ್ನು ಸೇವಿಸುವುದು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ.
ಮದ್ಯ ಸೇವನೆ ಆರೋಗ್ಯಕ್ಕೆ ಹಾನಿಕರ. ಕಡಿಮೆ ಪ್ರಮಾಣದಲ್ಲಿ ಆಲೋಹಾಲ್ ಸೇವನೆ ಮಾಡುತ್ತಿದ್ದರೂ ಅದ್ರ ಜೊತೆ ಸ್ನಾಕ್ಸ್ ಸೇವನೆ ಮಾಡಬೇಡಿ.