ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೆಲಿಕಾಂ ರೆಗ್ಯೂಲೇಟರಿ ಅಥಾರಿಟಿ ಆಫ್ ಇಂಡಿಯಾ(TRAI) ಸೆಪ್ಟೆಂಬರ್ 1 ರಿಂದ ಟೆಲಿಕಾಂ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತರುತ್ತಿದ್ದು, ಹೀಗಾಗಿ ನಿಯಮ ಉಲ್ಲಂಘಿಸಿದರೆ ಸಿಮ್ ಕಾರ್ಡ್ ಬ್ಲಾಕ್‌ಲಿಸ್ಟ್‌ಗೆ ಸೇರ್ಪಡೆಯಾಗಲಿದೆ.
ಹೌದು, ಫೇಕ್ ಕಾಲ್, ಫ್ರಾಡ್ ಕಾಲ್ಸ್‌ಗಳಿಗೆ ಮುಕ್ತಿ ನೀಡಲು TRAI ಹೊಸ ನಿಯಮ ಜಾರಿಗೆ ತರುತ್ತಿದೆ. ಒಂದು ವೇಳೆ ಗ್ರಾಹಕ ಫ್ರಾಡ್ ಅಥವಾ ನಕಲಿ ಕರೆಗಳ ಕುರಿತು ದೂರು ನೀಡಿದರೆ, ಟೆಲಿಕಾಂ ಕಂಪನಿಗಳು ಇದಕ್ಕೆ ಹೊಣೆಯಾಗುತ್ತದೆ ಎಂದು ಟ್ರಾಯ್ ಎಚ್ಚರಿಸಿದೆ.
TRAI ಹೊಸ ನಿಯಮದ ಪ್ರಕಾರ, ಗ್ರಾಹಕರಿಗೆ ಅನಗತ್ಯ ಕರೆ, ಫೇಕ್ ಕಾಲ್, ಜಾಹೀರಾತು ಸೇರಿದಂತೆ ಪ್ರಚಾರದ ಕರೆಗಳನ್ನು ಮಾಡುವಂತಿಲ್ಲ. ಟೆಲಿಕಾಂ ಸೇವೆ ಒದಗಿಸುವ ಕಂಪನಿಗಳು ನಕಲಿ ಕರೆಗಳಿಗೆ ಕಡಿವಾಣ ಹಾಕಬೇಕು. ಇದಕ್ಕಾಗಿ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ನೆರವು ಪಡೆದು ನಕಲಿ ಕರೆಗಳನ್ನು ನಿಯಂತ್ರಿಸಲು ಟ್ರಾಯ್ ಸೂಚಿಸಿದೆ. ಇದರ ಹೊರತಾಗಿಯೂ ಗ್ರಾಹಕರಿಗೆ ನಕಲಿ ಕರೆಗಳು ಬಂದಲ್ಲಿ, ಟೆಲಿಕಾಂ ಆಪರೇಟರ್ ಹಾಗೂ ನಕಲಿ ಕರೆ ಮಾಡಿದ ಸಂಸ್ಥೆಗಳು, ವ್ಯಕ್ತಿಗಳು ಶಿಕ್ಷೆಗೆ ಗುರಿಯಾಗಲಿದ್ದಾರೆ.
ಹೊಸ ವಿಧಾನ, ಹೊಸ ಮಾದರಿ ಮೂಲಕ ಗ್ರಾಹಕರಿಗೆ ನಕಲಿ ಕರೆಗಳನ್ನು ಮಾಡಲಾಗುತ್ತದೆ. ಹಲವು ಕಂಪನಿಗಳು ವೈಯುಕ್ತಿ ಫೋನ್ ನಂಬರ್, ಖಾಸಗಿ ಫೋನ್ ನಂಬರ್ ಮೂಲಕ ಕರೆ ಮಾಡಿ ಗ್ರಾಹಕರಿಗೆ ತೊಂದರೆ ನೀಡುತ್ತಿರುವ ದೂರುಗಳು ವರದಿಯಾಗಿದೆ. ಹೀಗೆ ಮಾಡಿದಲ್ಲಿಲ್ಲ, ನಕಲಿ ಕರೆ ಮಾಡುವ ಫೋನ್ ನಂಬರ್‌ಗಳನ್ನು 2 ವರ್ಷ ಬ್ಲಾಕ್‌ಲಿಸ್ಟ್‌ಗೆ ಸೇರ್ಪಡೆ ಮಾಡಲಾಗುತ್ತದೆ. ಸ್ಪಾಮ್ ಕಾಲ್ಸ್ ನಿಯಂತ್ರಿಸಲು ಟ್ರಾಯ್ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ.
ಇತ್ತೀಚೆಗೆ ಕಂಪನಿಗಳ ಪ್ರಮೋಶನ್ ವಿಚಾರಕ್ಕೂ ಸ್ಪಾಮ್ ಕಾಲ್ ಮಾಡಲಾಗುತ್ತಿದೆ. ಅನಗತ್ಯ ಕರೆಗಳಿಂದ ಗ್ರಾಹಕರು ಕಿರಿ ಕಿರಿ ಅನುಭವಿಸುತ್ತಿದ್ದಾರೆ. ನಕಲಿ ಕರೆಗಳಿಂದ ಹಲವು ಗ್ರಾಹಕರು ಮೋಸ ಹೋಗುತ್ತಿದ್ದಾರೆ. ಈ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಗಳಲ್ಲೂ ದೂರು ದಾಖಲಾಗಿದೆ. ಸ್ಪಾಮ್ ಕಾಲ್ಸ್ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಟ್ರಾಯ್ ಈ ಎಲ್ಲಾ ಮಾಹಿತಿ ಆಧರಿಸಿ ಇದೀಗ ಹೊಸ ನಿಯಮ ರೂಪಿಸಿದೆ. ಹೊಸ ನಿಯಮ ಸೆಪ್ಟೆಂಬರ್ 1 ರಿಂದ ಜಾರಿಗೆ ಬರಲಿದೆ.