Sunday, August 14, 2022

Latest Posts

ಬಳ್ಳಾರಿ ‌ಗ್ರಾಮೀಣ ಕ್ಷೇತ್ರದಿಂದಲೇ ಸ್ಪರ್ಧೆ, ಸುಳ್ಳು ವದಂತಿಗಳಿಗೆ ಕಿವಿ ಕೊಡಬೇಡಿ : ಶಾಸಕ ಬಿ.ನಾಗೇಂದ್ರ

ದಿಗಂತ ವರದಿ ಬಳ್ಳಾರಿ:

ಜಿಲ್ಲೆಯಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಬಗ್ಗೆ ಕೆಲವರು ಸುಳ್ಳು ಸುದ್ದಿ ಹರಡಿಸಲು‌ ಮುಂದಾಗಿದ್ದು, ಇದಕ್ಕೆ ಜಿಲ್ಲೆಯ ನಾಗರಿಕರು ಕಿವಿ ಕೊಡಬೇಡಿ, ಗ್ರಾಮೀಣ ಕ್ಷೇತ್ರದಿಂದಲೇ ಸ್ಪರ್ಧಿಸುವೆ ಎಂದು ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ತಿಳಿಸಿದ್ದಾರೆ.

ಹಾಲಿ ಶಾಸಕ ನಾಗೇಂದ್ರ ಅವರು ಕ್ಷೇತ್ರ ಬದಲಿಸಲಿದ್ದಾರೆ ಎನ್ನುವುದು ಸೇರಿದಂತೆ ನಾನಾ ಸುಳ್ಳು ಸುದ್ದಿಗಳನ್ನು ಕೆಲವರು ಹರಡಿಸಲು ಮುಂದಾಗಿದ್ದಾರೆ, ಇದು ಶುದ್ದ ಸುಳ್ಳು, ಇದಕ್ಕೆ ಕ್ಷೇತ್ರದ ಜನರು ಕಿವಿಕೊಡಬೇಡಿ, ಸುಖಾಸುಮ್ಮನೇ ಗ್ರಾಮೀಣ ಕ್ಷೇತ್ರದ ಜನರಲ್ಲಿ ಗೊಂದಲ ಸೃಷ್ಟಿಸುವ ವ್ಯವಸ್ಥಿತ ಪಿತೂರಿ ಇದಾಗಿದೆ. ಇಂತವರಿಗೆ ನಾನಲ್ಲ ನನ್ನ ಕ್ಷೇತ್ರದ ಜನರೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ.

ಬಳ್ಳಾರಿ ಗ್ರಾಮೀಣ ಕ್ಷೇತ್ರದ ಜನರ ಋಣ ನನ್ನ ಮೇಲಿದೆ, ಕ್ಷೇತ್ರ ಬಿಟ್ಟು ಬಂದಿದ್ದ ನನ್ನನ್ನು ಪ್ರೀತಿಯಿಂದ ಸ್ವಾಗತಿಸಿ, ಚುನಾವಣೆಯಲ್ಲಿ ಆರ್ಶಿವಾದ ಮಾಡಿದ್ದಾರೆ, ಇಲ್ಲಿವರೆಗೂ ಕ್ಷೇತ್ರದ ಜನರು ನನ್ನನ್ನು ಮನೆ ಮಗನಾಗಿ ನೋಡಿಕೊಳ್ಳುತ್ತಿದ್ದಾರೆ, ಕ್ಷೇತ್ರದ ಜನರೇ ನನ್ನ ಉಸಿರು, ಹೀಗಿರುವಾಗ ಕೆಲವರು ಚುನಾವಣೆ ಸಮಯದಲ್ಲಿ ಇಂತಹ ಸುಳ್ಳು ಸುದ್ದಿಗಳನ್ನು ಸೃಷ್ಟಿಸಿ ಜನರಲ್ಲಿ ಗೊಂದಲ ಸೃಷ್ಟಿಸಲು ಮುಂದಾಗಿದ್ದಾರೆ, ತುಂಬು ಹೃದಯದ ಪ್ರೀತಿಯ ಅಪ್ಪುಗೆ ಬಿಟ್ಟು ಕ್ಷೇತ್ರ ಬದಲಿಸುವ ಮಾತೇ ಇಲ್ಲ, ಅವರ ಸೇವೆ ಅತ್ಯಮೂಲ್ಯವಾದದು, ಇದಕ್ಕಿಂತ ಭಾಗ್ಯ ‌ನನಗೆ ಬೇರೋಂದಿಲ್ಲ, ನಗರದ ಅಧಿದೇವತೆ ಶ್ರೀ ಕನಕ ದುರ್ಗಮ್ಮ ಹಾಗೂ ಕ್ಷೇತ್ರದ ಮತದಾರರ ಆರ್ಶಿವಾದದಿಂದ ಮತ್ತೋಮ್ಮೆ ಗೆಲುವು ಸಾಧಿಸಿ ಕ್ಷೇತ್ರದ ಜನರ ಮನೆ ಮಗನಾಗಿ ದುಡಿಯುವೆ ಎಂದು ಮನವಿ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss