April 9, 2026
Thursday, April 9, 2026
spot_img

1 ವಾರ ಊಟ ಕೊಡ್ಬೇಡಿ, ಪ್ಯಾನಿಕ್ ಬುಕ್ಕಿಂಗ್‌ ಮಾಡ್ಬೇಡಿ: ಹೀಗ್ಯಾಕಂದ್ರು ಆಹಾರ ಸಚಿವರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಗ್ಯಾಸಿನ ತಾತ್ಕಾಲಿಕ ಕೊರತೆಯಿಂದ ಹೋಟೆಲ್‌ ಉದ್ಯಮ ಗಂಭೀರವಾಗಿ ಪ್ರಭಾವಿತವಾಗಿದೆ. ಹೋಟೆಲ್‌ಗಳಿಗೆ ಬೇಕಾದ ಕಮರ್ಷಿಯಲ್ ಸಿಲಿಂಡರ್‌ಗಳು ಸದ್ಯ ಪೂರೈಕೆ ಆಗುತ್ತಿಲ್ಲವೆಂದು ಆಹಾರ ಮತ್ತು ತೈಲ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.

ಸಚಿವರು ಸಂಬಂಧಿತ ತೈಲ ಕಂಪನಿಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಹೋಟೆಲ್‌ಗಳಲ್ಲಿ ತಾತ್ಕಾಲಿಕ ಪರಿಹಾರ ಕ್ರಮಗಳನ್ನು ರೂಪಿಸಿದ್ದಾರೆ.

ಸಚಿವರು ವಿವರಿಸಿದಂತೆ, ರಾಜ್ಯದಲ್ಲಿ ದಿನಕ್ಕೆ 44,000 ಕಮರ್ಷಿಯಲ್ ಸಿಲಿಂಡರ್ ಅಗತ್ಯವಿದ್ದು, 20% ಮಾತ್ರ ಸಿಗುತ್ತಿದೆ. ಪೂರೈಕೆಯಲ್ಲಿ 4,000 ಸಿಲಿಂಡರ್ ಆಸ್ಪತ್ರೆಗಳಿಗೆ, 2,500 ಆಟೋ ರಿಕ್ಷಾಗಳಿಗೆ, 1,000 ಸಿಲಿಂಡರ್ ಹೋಟೆಲ್‌ಗಳಿಗೆ ಮೀಸಲಾಗಿವೆ. ಹೋಟೆಲ್ ಮಾಲೀಕರಿಗೆ ಪರ್ಯಾಯವಾಗಿ ಎಲೆಕ್ಟ್ರಿಕ್ ಸ್ಟೋವ್ ಬಳಕೆ ಮಾಡುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ:

ಸಿಲಿಂಡರ್ ಕೊರತೆಯಿಂದ ಹೋಟೆಲ್‌ಗಳು ಗ್ರಾಹಕರಿಗೆ ಒಂದು ವಾರ ಆಹಾರ ನೀಡದಂತೆ ಮನವಿ ಮಾಡಲಾಗಿದೆ. ಆರೋಗ್ಯ ಮತ್ತು ಮೆಡಿಕಲ್ ಸೇವೆಗಳಿಗೆ ಯಾವುದೇ ವ್ಯತ್ಯಯವಿಲ್ಲ. ಕೇಂದ್ರ ಸರ್ಕಾರ ಕೂಡ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಒತ್ತಾಯಿಸಿದ್ದಾರೆ. ಸಾರ್ವಜನಿಕರಿಗೆ ಪ್ಯಾನಿಕ್ ಬುಕ್ಕಿಂಗ್‌ ತಪ್ಪಿಸಿಕೊಳ್ಳುವಂತೆ, ಸಿಲಿಂಡರ್ ಬಳಕೆಯನ್ನು ಮಿತವಾಗಿ ನಡೆಸುವಂತೆ ಸೂಚಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !