HEALTH | ಬಾಳೆಹಣ್ಣು ಇಷ್ಟ ಇಲ್ವಾ? ಮಕ್ಕಳಿಗೂ, ವೃದ್ಧರಿಗೂ ಇದೇ ಬೆಸ್ಟ್ ಫುಡ್!

ಬಾಳೇ ಹಣ್ಣು ಯಾರಿಗೆ ತಾನೇ ಇಷ್ಟ ಇಲ್ಲ? ಮಕ್ಕಳಾದಿಯಾಗಿ ವಯೋವೃದ್ದರಿಗೂ ಬಾಳೇ ಹಣ್ಣು ಇಷ್ಟವೇ. ಇದೊಂದು ಪೂರ್ಣಾಹಾರ. ಬಾಳೆಹಣ್ಣಿಗೆ ಉಗಮಸ್ಥಾನ ಭಾರತ. ಭಾರತದ ಎಲ್ಲ ರಾಜ್ಯಗಳಲ್ಲೂ ಬಾಳೆ ಬೆಳೆಯುತ್ತಾರೆ.  ಕರ್ನಾಟಕ, ಕೇರಳ, ಅಸ್ಸಾಂ, ತಮಿಳುನಾಡು, ಆಂಧ್ರ, ಹಾಗೂ ಪಶ್ಚಿಮ ಬಂಗಾಳದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ.

A Breakfast With Bananas | Femina.in ಯೂರೋಪಿಯನ್ನರಲ್ಲಿ ಅಲೆಗ್ಸಾಂಡರ್, ಬಾಳೆಹಣ್ಣನ್ನು ಸವಿದ ಪ್ರಥಮನು. ಅವನು ತನ್ನ ದೇಶಕ್ಕೆ, ಬಾಳೆಹಣ್ಣನ್ನು ಪರಿಚಯಿಸಿದ.ಆಫ್ರಿಕ, ಇಜಿಪ್ಟ್ ನಿಂದ ಅರಬ್ ವರ್ತಕರು, ವಿಶ್ವದಾದ್ಯಂತ ಬಾಳೆಯನ್ನು ಮಾರಾಟಮಾಡಿ ಪ್ರಸಿದ್ಧಪಡಿಸಿದರು. ಬಾಳೇ ಹಣ್ಣಿನಲ್ಲಿ ಅನೇಕ ಆರೋಗ್ಯಕರ ಅಂಶಗಳಿವೆ. ಇದು ದೇಹಾರೋಗ್ಯವನ್ನು ಉತ್ತಮ ಪಡಿಸಲು ಸಹಕಾರಿ ಎಂಬುದು ಸಂಶೋಧನೆಗಳು ದೃಢಪಡಿಸಿವೆ.

36 Best-Ever Banana Recipes You Need To Bookmark‘ಮೈಂಡ್ ಸಂಸ್ಥೆ,ನಡೆಸಿದ, ಸರ್ವೇಕ್ಷಣೆಯ ಪ್ರಕಾರ, ಖಿನ್ನತೆಗೆ ಒಳಗಾದವರು ಒಂದು ಬಾಳೆಹಣ್ಣನ್ನು ಸೇವಿಸಿದ ಬಳಿಕ, ಹೆಚ್ಚಿನವರಲ್ಲಿ ಸುಧಾರಣೆ ಕಂಡುಬಂದಿದೆಯಂತೆ. ಟ್ರಿಪ್ಟೋಪ್ಯಾನ್ ಎಂಬ ಪ್ರೋಟೀನ್ ಇದಕ್ಕೆ ಕಾರಣ. ನಮ್ಮ ದೇಹ ಈ ಪ್ರೋಟೀನ್ ನನ್ನು ಸೆರೋಟಿನ್ ಆಗಿ ಪರಿವರ್ತಿಸುತ್ತದೆ. ಇದರಿಂದ ಉದ್ವೇಗಶಮನಗೊಂಡು ಪ್ರಪುಲ್ಲಚಿತ್ತರನ್ನಾಗಿಸುವ ಅಂಶವೆಂದು ಪರಿಗಣಿತವಾಗಿದೆ. ಕಾಡುವ ನಮ್ಮೆಲ್ಲರ ಖಿನ್ನತೆಗೆ ಮಾತ್ರೆಗಳ ಮೊರೆಹೋಗದೆ, ದಿನಕ್ಕೊಂದು ಬಾಳೆಹಣ್ಣಿನ ಸೇವನೆಯಿಂದ ಪ್ರಯೋಜನ ಕಾಣಬಹುದಾಗಿದೆ.

15 Delicious Banana Recipes To Try At Home - NDTV Food
ಬಾಳೆಹಣ್ಣಿನಲ್ಲಿರುವ ಬಿ-6 ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣವನ್ನು ಸಮಸ್ಥಿತಿಯಲ್ಲಿರಿಸಿ, ನಮ್ಮ ಮನಸ್ಥಿತಿಯ ಮೇಲೆ ಪರಿಣಾಮವನ್ನುಂಟುಮಾಡುತ್ತದೆ. ಬಾಳೆಹಣ್ಣು ನಮ್ಮ ದೇಹದಲ್ಲಿ ತ್ವರಿತ ಶಕ್ತಿ ವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಗ್ಲೂಕೋಸ್ ಮಟ್ಟವು ತುಂಬಾ ಹೆಚ್ಚಾಗಿದೆ, ಇದರಿಂದಾಗಿ ನಮ್ಮ ದೇಹವು ಶಕ್ತಿಯನ್ನು ಪಡೆಯುತ್ತದೆ. ಆದ್ದರಿಂದ, ಪ್ರತಿದಿನ ತಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಸೇರಿಸಿದರೆ, ಉತ್ತಮ ಶಕ್ತಿ ಮಟ್ಟವನ್ನು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ, ಇದು ದೇಹದಲ್ಲಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Banana Cake Recipe: How to make Banana Cake Recipe at Home | Homemade Banana Cake Recipe - Times Foodರಕ್ತಹೀನತೆ ತಡೆಯಲು ಸಹಕಾರಿ: ಬಾಳೆಹಣ್ಣಿನಲ್ಲಿ ಕಬ್ಬಿಣದ ಅಂಶ ಸಮೃದ್ಧವಾಗಿರುವುದರಿಂದ ದೇಹದಲ್ಲಿ ಕೆಂಪು ರಕ್ತಕಣಗಳ ಉತ್ಪಾದನೆಯನ್ನು ಪ್ರಚೋದಿಸಿ, ರಕ್ತಹೀನತೆಯನ್ನು ನೀಗಿಸುತ್ತದೆ.

Vazhakkai Varuval Recipe | Raw Banana Fryರಕ್ತದೊತ್ತಡ: ಪೊಟಾಷಿಯಮ್, ಲವಣ ಸಮೃದ್ಧಿಯಾಗಿದ್ದು, ಉಪ್ಪಿನ ಅಂಶ ತೀರಾ ಕಡಿಮೆ. ಇದರಿಂದ ಬಾಳೆಹಣ್ಣು ರಕ್ತದೊತ್ತಡವನ್ನು ತಡೆಗಟ್ಟಲು ಸೂಕ್ತ ಅಸ್ತ್ರವೆಂದೇ ಪರಿಗಣಿಸಲಾಗಿದೆ.

ರೋಡ್ ಸೈಡ್ ಬಾಳೆಕಾಯಿ ಬಜ್ಜಿ ಮನೇಲಿ ಮಾಡಿ | RAW BANANA BAJJI | BAJJI RECIPE - YouTubeಮಲಬದ್ಧತೆ :ನಾರಿನ ಅಂಶ ಯತೇಚ್ಛ ಇದೆಯಲ್ಲದೆ  ಕೃತಕ ವಿರೇಚಕಗಳಿಲ್ಲದೆ, ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸಲು ಈ ಬಾಳೇಹಣ್ಣುಗಳು ಅತ್ಯಂತ ಸಹಾಯಕಾರಿ.

Cucumber steam kadubu Recipe by Usha V Bhat - Cookpad

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!