ಕಾಂಗ್ರೆಸ್ ಗ್ಯಾರೆಂಟಿಗಳಲ್ಲಿ ಇನ್ನೂ ಗೊಂದಲವಿದೆ : ಪ್ರಲ್ಹಾದ್ ಜೋಶಿ

ಹೊಸದಿಗಂತ ವರದಿ ಹುಬ್ಬಳ್ಳಿ:

ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಂದ ತಕ್ಷಣ ಎಲ್ಲ ಉಚಿತವಾಗಿ ನೀಡುತ್ತೇವೆ ಎಂದು ಹೇಳಿದ್ದರು. ಈಗ 200 ಯೂನಿಟ್ ಸರಾಸರಿ ಅಂತ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಪ್ರಲ್ಹಾದ್ ಜೋಶಿ ಹರಿಹಾಯ್ದರು.
ಮೊದಲು ನನಗೂ ಉಚಿತ, ನಿನಗೂ ಉಚಿತ, ಬಸಯ್ಯಗೂ ಫ ಹಾಗೂ ರಂಗಯ್ಯಗೂ ಉಚಿತ ಅಂತ ಹೇಳಿದ್ದರು. ಯುವ ನಿಧಿ ಗ್ಯಾರಂಟಿ ಬಗ್ಗೆ ಪ್ರಣಾಳಿಕೆಯಲ್ಲಿ ಯಾವುದೇ ಷರತ್ತು ವಿಧಿಸಿರಲಿಲ್ಲ. ಆದರೆ ಈಗ ಹಲವು ಗೊಂದಲಗಳಿವೆ ಎಂದು ಹೇಳಿದರು.

ಎಲ್ಲರಿಗೂ ಕೊಟ್ಟ ಹಾಗೇ ಆಗಿರಬೇಕು ಆದರೆ ಯಾರಿಗೂ ಸಿಕ್ಕಿರಬಾರದು ಎಂಬ ಲೆಕ್ಕಾಚಾರ ಕಾಂಗ್ರೆಸ್ ಸರ್ಕಾರದ್ದಾಗಿದೆ. ಗೃಹ ಲಕ್ಷ್ಮೀ ಯಾರು ಅಂತ ನಿರ್ಧಾರ ಮಾಡಿ ಅಂತ ಜನರಿಗೆ ಬಿಟ್ಟಿದ್ದಾರೆ. ಇನ್ನೂ ಜೂ. 15 ರ ವರಗೆ ಹಲವಾರು ಬದಲಾವಣೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

ಬಸ್ ಗ್ಯಾರಂಟಿ ಬಿಟ್ಟು ಉಳಿದಿರುವ ನಾಲ್ಕು ಭರವಸೆ ಗೊಂದಲದ ಗೂಡಾಗಿವೆ. ಉಚಿತ ಭರವಸೆಯಿಂದ ಆರ್ಥಿಕ ವ್ಯವಸ್ಥೆ ಏನು ಆಗುತ್ತದೆ ಎಂದು ಎಲ್ಲಿ ಸ್ಪಷ್ಟ ಪಡಿಸಿಲ್ಲ. ಇದು ಕಣ್ಣೊರೆಸುವ ತಂತ್ರ ಎಂದು ಹೇಳಿದರು.‌
ಹತ್ತು ಕೆಜಿ ಅಕ್ಕಿ ವಿತರಣೆ ಬಗ್ಗೆ ಸ್ಪಷ್ಟತೆ ಇಲ್ಲ. ಐದು ಕೆಜಿ‌ ಅಕ್ಕಿ ಕೇಂದ್ರ ಸರ್ಕಾರ‌ ನೀಡುತ್ತದೆ. ಇದನ್ನು ಪ್ರಾಮಾಣಿಕವಾಗಿ ಹೇಳಿ ಐದು ಕೆಜಿ‌ ರಾಜ್ಯ ಸರ್ಕಾರ ಐದು ಕೆಜಿ ಕೇಂದ್ರ ಸರ್ಕಾರ ನೀಡುತ್ತದೆ. ಐದು ಕೆಜಿ ಅಕ್ಕಿ ರಾಜ್ಯ ಸರ್ಕಾರವೇ ಎಂದು ಹೇಳುತ್ತಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್ ಪಾರ್ಟಿಯವರು ಇಷ್ಟು ದಿನ ದೇಶದಲ್ಲಿ ನಿರುದ್ಯೋಗಗಳಾಗಿದ್ದರು. ಈಗ ಕರ್ನಾಟಕದಲ್ಲಿ ಉದ್ಯೋಗ ಸಿಕ್ಕಿದೆ. ಹೀಗಾಗಿ ಕಾಂಗ್ರೆಸ್ ದೊಡ್ಡ ಪ್ರಮಾಣದಲ್ಲಿ ಹಾರಾಟ ಮಾಡುತ್ತಿದೆ. ಇದಕ್ಕೆ ಜನ ಲೋಕಸಭೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!