ಹಿಂದಿನ ಸಮಯದಿಂದಲೂ ಹಾಲಿನ ಕೆನೆಯನ್ನು ಮುಖಕ್ಕೆ ಹಚ್ಚಿಕೊಂಡು ಬರುತ್ತಿದ್ದಾರೆ. ಇದರ ಬಳಕೆಯಿಂದ ಗ್ಲೋಯಿಂಗ್ ಹಾಗೂ ಮಾಯಿಶ್ಚರ್ ಆದ ಸ್ಕಿನ್ ನಿಮ್ಮದಾಗುತ್ತದೆ. ಇದನ್ನು ಎರಡು ರೀತಿ ಅಪ್ಲೇ ಮಾಡಬಹುದು..
ಹಾಲಿನ ಕೆನೆಗೆ ಅಕ್ಕಿ ಹಿಟ್ಟು ಹಾಗೂ ಜೇನುತುಪ್ಪ ಹಾಕಿಕೊಂಡು ಪ್ಯಾಕ್ ಮಾಡಿ ಮುಖಕ್ಕೆ ಹಚ್ಚಿ, ಹದಿನೈದು ನಿಮಿಷದ ನಂತರ ತೊಳೆಯಿರಿ, ಇದು ಡ್ರೈ ಸ್ಕಿನ್ ಇರುವವರಿಗೆ ಸೂಕ್ತವಾಗಿದೆ.
ಹಾಲಿನ ಕೆನೆಗೆ ಕಡ್ಲೆಹಿಟ್ಟು ಮಿಕ್ಸ್ ಮಾಡಿ, ಜೊತೆಗೆ ಅರಿಶಿಣ ಪುಡಿ ಹಾಕಿ ಪ್ಯಾಕ್ ತಯಾರಿಸಿ ಹಚ್ಚಿಕೊಳ್ಳಿ. ಇದು ಎಣ್ಣೆಯುಕ್ತ ತ್ವಚೆಯವರಿಗೆ ಉತ್ತಮ.