ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ, ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್‌ಗೆ ಒಂದು ಕಾಲದಲ್ಲಿ ನಟಿ ಅನುಷ್ಕಾ ಶರ್ಮಾ ಮೇಲೆ ಕ್ರಶ್ ಇತ್ತಂತೆ! ಸಿನಿಮಾಒಂದರ ಶೂಟಿಂಗ್ ಉದ್ದಕ್ಕೂ ಅನುಷ್ಕಾ ಶರ್ಮಾ ಮೇಲೆ ಕ್ರಶ್ ಇತ್ತು ಎಂದು ಅವರೇ ಹೇಳಿಕೊಂಡಿದ್ದಾರೆ.
ನಟ ರಣ್‌ಬೀರ್ ಕಪೂರ್ ಹಾಗೂ ಅನುಷ್ಕಾ ಶರ್ಮಾ ಅಭಿನಯದ ಏ ದಿಲ್ ಹೇ ಮುಷ್ಕಿಲ್ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದು ಕರಣ್ ಜೋಹರ್. ಈ ಸಿನಿಮಾ ವೇಳೆ ತಮ್ಮ ಪ್ರೀತಿ ಬಗ್ಗೆ ಮಾತನಾಡಿದ್ದಾರೆ.
ಅನುಷ್ಕಾ ಶರ್ಮಾ ಏಕೋ ಇತ್ತೀಚೆಗೆ ಚಿತ್ರರಂಗದಲ್ಲಿ ಅಷ್ಟಾಗಿ ಆ್ಯಕ್ಟೀವ್ ಆಗಿಲ್ಲ. ಅವರು ಮಕ್ಕಳ ಆರೈಕೆಯಲ್ಲಿ ಬ್ಯುಸಿ ಇದ್ದಾರೆ. ಅವರು ‘ಯೇ ದಿಲ್ ಹೇ ಮುಷ್ಕಿಲ್’ ಚಿತ್ರದಲ್ಲಿ ನಟಿಸಿದ್ದರು.
‘ಕಾಫಿ ವಿತ್ ಕರಣ್’ ವೇದಿಕೆ ಮೇಲೆ ಕರಣ್ ಜೋಹರ್ ಅವರು ಒಂದು ಶಾಕಿಂಗ್ ವಿಚಾರ ಹೇಳಿದ್ದರು. ‘ಯೇ ದಿಲ್ ಹೇ ಮುಷ್ಕಿಲ್’ ಚಿತ್ರದ ಶೂಟ್ ವೇಳೆ ಅನುಷ್ಕಾ ಮೇಲೆ ಕ್ರಶ್ ಆಗಿತ್ತು ಎಂದು ಹೇಳಿಕೊಂಡಿದ್ದರು. ಕತ್ರಿನಾ, ಅನುಷ್ಕಾ ‘ಕಾಫಿ ವಿತ್ ಕರಣ್’ ಶೋಗೆ ಬಂದಿದ್ದರು. ಈ ವೇಳೆ ಕರಣ್ ಅವರು ಈ ವಿಚಾರ ಹೇಳಿದರು. ಇದನ್ನು ಕೇಳಿದ ಅನುಷ್ಕಾ ಶಾಕ್ ಆದರು. ‘ನನ್ನ ಮೇಲೆ ಕ್ರಶ್ ಇದೆ ಎಂದು ಹೇಳಿದ್ರಾ’ ಎಂಬುದಾಗಿ ಕರಣ್ ಜೋಹರ್ ಬಳಿ ಅನುಷ್ಕಾ ಮತ್ತೊಮ್ಮೆ ಕೇಳಿದರು. ‘ಹೌದು, ಸಿನಿಮಾ ಮಾಡುವಾಗ ಸಂಪೂರ್ಣ ನಿಮ್ಮ ಮೇಲೆ ಕ್ರಶ್’ ಇತ್ತು ಎಂದಿದ್ದರು.
ಕರಣ್ ಜೋಹರ್‌ಗೆ ನನ್ನ ಮೇಲೆ ಕ್ರಶ್ ಇತ್ತು ಎಂದು ಕೇಳಿ ಖುಷಿಯಾಯ್ತು ಎಂದು ಅನುಷ್ಕಾ ನಕ್ಕಿದ್ದಾರೆ.