‘ಅಗ್ನಿಪಥʼದ ಹೆಸರಲ್ಲಿ ಯುವಕರ ಅಗ್ನಿಪರೀಕ್ಷೆ ಮಾಡಬೇಡಿ : ಕೇಂದ್ರದ ವಿರುದ್ಧ ಕಿಡಿಕಾರಿದ ರಾಹುಲ್‌ ಗಾಂಧಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಇಡಿ ವಿಚಾರಣೆ ಎದುರಿಸುತ್ತಿರುವ ರಾಹುಲ್‌ ಗಾಂಧಿ ಕೇಂದ್ರ ಸರ್ಕಾರ ಮೊನ್ನೆಯಷ್ಟೇ ಜಾರಿಗೊಳಿಸಿರುವ ಅಗ್ನಿಪಥ ಯೋಜನೆಯ ವಿರುದ್ಧ ಕಿಡಿಕಾರಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ರಾಗಾ “ರ್ಯಾಂಕ್‌ ಇಲ್ಲ, ಪಿಂಚಣಿಯಿಲ್ಲ, ಎರಡು ವರ್ಷದಿಂದ ನೇರ ನೇಮಕಾತಿಯಿಲ್ಲ, ನಾಲ್ಕು ವರ್ಷದ ನಂತರ ಸ್ಥಿರ ಭವಿಷ್ಯವಿಲ್ಲ, ಸೇನೆಯ ಕುರಿತು ಸ್ಥಿರ ಭವಿಷ್ಯವಿಲ್ಲ, ದೇಶದ ನಿರುದ್ಯೋಗಿ ಯುವಕರ ಕೂಗನ್ನು ಆಲಿಸಿ, ಅವರನ್ನು ಅಗ್ನಿಪಥದಲ್ಲಿ ಓಡಿಸಿ ಅವರ ಸಂಯಮದ ಅಗ್ನಿಪರೀಕ್ಷೆ ಮಾಡಬೇಡಿ ಪ್ರಧಾನ ಮಂತ್ರಿಯವರೇ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಗ್ನಿಪಥ ಯೋಜನೆಯ ಕುರಿತು ರಾಜಸ್ಥಾನ ಬಿಹಾರಗಳಲ್ಲಿ ಅಪಾರ ಪ್ರಮಾಣದಲ್ಲಿ ರಕ್ಷಣಾ ಅಭ್ಯರ್ಥಿಗಳು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ. ಅದೇ ರೀತಿ ಇನ್ನೊಂದು ಟ್ವೀಟ್‌ ಮಾಡಿರುವ ಅವರು “ಭಾರತವು ಎರಡು ಕಡೆಗಳಿಂದ ಬೆದರಿಕೆಗಳನ್ನು ಎದುರಿಸುತ್ತಿರುವಾಗ, ಅಗ್ನಿಪಥ್ ಯೋಜನೆಯು ನಮ್ಮ ಸಶಸ್ತ್ರ ಪಡೆಗಳ ಕಾರ್ಯಾಚರಣೆಯ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಬಿಜೆಪಿ ಸರ್ಕಾರವು ನಮ್ಮ ಪಡೆಗಳ ಘನತೆ, ಸಂಪ್ರದಾಯಗಳು, ಶೌರ್ಯ ಮತ್ತು ಶಿಸ್ತಿನ ಮೇಲೆ ರಾಜಿ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು” ಎಂದು ರಾಹುಲ್ ಗಾಂಧಿ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!