ಹೊಸ ಮನೆ ಪ್ರತಿಯೊಬ್ಬರ ಕನಸ್ಸು. ವರ್ಷಗಳ ಪರಿಶ್ರಮದಿಂದ ಅಂದದ ಮನೆಯೊಂದನ್ನು ಕಟ್ಟಿ ಅದ್ಧೂರಿಯಾಗಿ ಗೃಹಪ್ರವೇಶ ಮಾಡಿ ಒಳಕ್ಕೆ ಹೋಗುತ್ತೀರಿ. ಆದರೆ ಮನೆಯ ವಾಸ್ತು, ಮನೆಯಲ್ಲಿ ಇಡಬೇಕಾದ ವಸ್ತುಗಳ ಬಗ್ಗೆ ನಿಗಾ ವಹಿಸದೇ ಇದ್ದಲ್ಲಿ ಮನೆಯ ನೆಮ್ಮದಿ ಹಾಳಾಗುವ ಸಾಧ್ಯತೆ ಇರುತ್ತದೆ. ಹಳೆಯ ಮನೆಯಿಂದ ಹೊಸ ಮನೆಗೆ ಆಗಮಿಸುವಾಗ ಕೆಲವು ವಸ್ತುಗಳನ್ನು ಎಸೆದು ಹೊಸ ವಸ್ತುಗಳನ್ನು ಖರೀದಿ ಮಾಡಿ ಇದು ನೀವು ಹೋಗುತ್ತಿರುವ ಮನೆಯಲ್ಲಿ ಅದೃಷ್ಟ ಬದಲಾಗುವಂತೆ ಮಾಡುತ್ತದೆ. ಯಾವೆಲ್ಲ ಹಳೆಯ ವಸ್ತುಗಳನ್ನು ಎಸೆದು ಹೊಸ ವಸ್ತುಗಳನ್ನು ಖರೀದಿ ಮಾಡಬೇಕು? ಇಲ್ಲಿದೆ ಮಾಹಿತಿ..
ಹೊಸ ತಾಮ್ರದ ಕಳಸ

ಹಳೆಯ ತಾಮ್ರದ ಕಳಸವನ್ನು ತೆಗೆದು ಹೊಸ ತಾಮ್ರದ ಕಳಸವನ್ನು ತೆಗೆದುಕೊಂಡು ಬನ್ನಿ. ಈ ಕಳಸಕ್ಕೆ ಸಿಹಿನೀರನ್ನು ಹಾಕಿ, ಮಾವಿನ ಎಲೆಗಳನ್ನು ಇರಿಸಿ, ತೆಂಗಿನಕಾಯಿಯನ್ನು ಇಟ್ಟು ಮನೆಯ ನಾರ್ತ್ ಈಸ್ಟ್ ಕಾರ್ನರ್‌ನಲ್ಲಿ ಇಡಿ. ಇದು ಪಾಸಿಟಿವ್ ಎನರ್ಜಿಯನ್ನು ಮನೆಗೆ ಸ್ವಾಗತಿಸುತ್ತದೆ.
ಗಣೇಶ ಅಥವಾ ಲಕ್ಷ್ಮೀ ವಿಗ್ರಹ

ಹಳೆಯದಾಗಿರುವ ಅಥವಾ ಬಿರುಕು ಬಿಟ್ಟಿರುವ ವಿಗ್ರಹಗಳಿದ್ದರೆ ಅವುಗಳನ್ನು ಎತ್ತಿಡಿ ಅಥವಾ ದೇವರ ಮರಗಳ ಕೆಳಕ್ಕೆ ಇಟ್ಟುಬನ್ನಿ. ಹೊಸದಾಗಿ ಗಣೇಶ ಅಥವಾ ಲಕ್ಷ್ಮೀ ವಿಗ್ರಹವನ್ನು ತಂದೆ ದೇವರ ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿ. ಇದು ನಿಮಗೆ ಹಣ, ಜ್ಞಾನ ನೀಡುತ್ತದೆ ಹಾಗೂ ನಿಮ್ಮ ಬ್ಯಾಡ್‌ಲಕ್‌ನ್ನು ಹೋಗಲಾಡಿಸುತ್ತದೆ.
ಹೊಸ ಪೊರಕೆಯೂ ಮುಖ್ಯ

ಇಷ್ಟು ಸಮಯ ಹಳೆಯ ಮನೆಯನ್ನು ಗುಡಿಸುತ್ತಿದ್ದ ಅದೇ ಹಳೆಯ ಪೊರಕೆಯನ್ನು ಹೊಸ ಮನೆಯ ಒಳಕ್ಕೆ ತರಬೇಡಿ. ಹೊಸ ಮನೆಗೆ ಹೊಸ ಪೊರಕೆಯ ಅವಶ್ಯಕತೆ ಇದೆ. ಪೊರಕೆಯ ಹ್ಯಾಂಡಲ್‌ಗೆ ಬಿಳಿ ದಾರವನ್ನು ಕಟ್ಟಿ. ಪೊರಕೆ ಎಂದು ಅಸಡ್ಯೆ ಮಾಡಬೇಡಿ. ಇದನ್ನು ಗೌರವದಿಂದ ಬಳಕೆ ಮಾಡಿ.
ಹಾಲು ಕಾಯಿಸುವ ಹೊಸ ಪಾತ್ರೆ

ಹೊಸ ಮನೆಯಲ್ಲಿ ಹಾಲು ಕಾಯಿಸುವಾಗ ಹಳೆಯ ಪಾತ್ರೆಯನ್ನು ಬಳಕೆ ಮಾಡುವುದಿಲ್ಲ. ಇದಕ್ಕೆಂದೇ ಹೊಸ ಪಾತ್ರೆ ತೆಗೆದುಕೊಳ್ಳಿ. ಒಲೆ ಮೇಲಿಟ್ಟು ಹಾಲು ಹಾಕಿ ಅದನ್ನು ಉಕ್ಕಿಸಿ. ಈ ರೀತಿ ಮಾಡುವುದರಿಂದ ಖುಷಿ ನಿಮ್ಮ ಮನೆಯನ್ನು ಆವರಿಸುತ್ತದೆ.
ಹೊಸ ಅಕ್ಕಿ ಡಬ್ಬ

ಮನೆಗೆ ಆಗಮಿಸುವಾಗ ಹೊಸದೊಂದು ಡಬ್ಬಿಯಲ್ಲಿ ಅಕ್ಕಿಯನ್ನು ತನ್ನಿ. ಇದರ ಮಧ್ಯೆ ಒಂದು ರೂಪಾಯಿ ನಾಣ್ಯ ಅಥವಾ ಬೆಳ್ಳಿ ನಾಣ್ಯವನ್ನು ಹಾಕಿ ಅಡುಗೆ ಮನೆಯಲ್ಲಿ ಇಡಿ. ಈ ರೀತಿ ಮಾಡುವುದರಿಂದ ಹಣಕಾಸು ಹಾಗೂ ಅನ್ನಕ್ಕೆ ಎಂದಿಗೂ ಕೊರತೆ ಉಂಟಾಗುವುದಿಲ್ಲ.



