ಉಚಿತವಾಗಿ ಪ್ರಯಾಣಿಸೋದಿಲ್ಲ,ತಗೊಳ್ಳಿ ದುಡ್ಡು, ಟಿಕೆಟ್ ಕೊಡಿ : ಕಂಡಕ್ಟರ್ ಜತೆ ವೃದ್ಧೆ ಜಗಳ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಸ್‌ನಲ್ಲಿ ರಶ್ ಇದ್ದು, ಮಿಸ್ ಆಗಿ ಕಂಡಕ್ಟರ್ ಟಿಕೆಟ್ ಕೇಳೋದು ಮರೆತು ಹೋದರೆ ದುಡ್ಡು ಉಳಿತಪ್ಪಾ ಅನ್ನೋ ಎಷ್ಟೋ ಜನ ಇದ್ದಾರೆ. ಇನ್ನು ಮಕ್ಕಳಿಗೆ ಟಿಕೆಟ್ ದುಡ್ಡು ಕೇಳ್ತಾರೆ ಅಂತ ನನ್ನ ಮಗ ಈಗಿನ್ನಾ ಎರಡನೇ ಕ್ಲಾಸ್ ಅಂತ ಸುಳ್ಳು ಹೇಳೋರೂ ಇದ್ದಾರೆ.

ಆದರೆ ಇಲ್ಲೊಬ್ಬರು ಅಜ್ಜಿ ನನ್ನ ಬಳಿ ದುಡ್ಡ ತಗೊಳ್ಳಿ, ಉಚಿತವಾಗಿ ಪ್ರಯಾಣಿಸೋದಿಲ್ಲ ಎಂದು ಹಠ ಹಿಡಿದಿದ್ದಾರೆ. ತಮಿಳುನಾಡಿನ ಮಧುಕರೈ ಮತ್ತು ಪಾಲತುರೈ ಮಧ್ಯೆ ಸಂಚರಿಸುವ ಸರ್ಕಾರಿ ಬಸ್‌ನಲ್ಲಿ ವೃದ್ಧೆ ಕಂಡಕ್ಟರ್ ಜತೆ ಮಾತನಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

ವೈಟ್ ಬೋರ್ಡ್ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ವ್ಯವಸ್ಥೆ ಇದೆ. ಆದರೆ ಅಜ್ಜಿ ದುಡ್ಡು ತಗೊಳ್ಳಿ ಅಂತ ವಾದ ಮಾಡ್ತಿರೋ ವಿಡಿಯೋ ಇದೀಗ ವೈರಲ್ ಆಗಿದೆ. ಒಸಿಯಾಗಿ ಓಡಾಡೋಲ್ಲ, ದುಡ್ಡು ತಗೊಳ್ಳಿ ಎಂದು ಅಜ್ಜಿ ಹೇಳ್ತಿದ್ದಾರೆ.

ವಯಸ್ಸಾದರೂ, ಟಿಕೆಟ್ ವ್ಯವಸ್ಥೆ ಫ್ರೀ ಇದ್ದರೂ ಸ್ವಾಭಿಮಾನಿ ಅಜ್ಜಿ ದುಡ್ಡು ಕೊಟ್ಟೇ ಹೋಗ್ತೀನಿ ಎಂದು ಹೇಳುತ್ತಿರುವ ಈ ವಿಡಿಯೋಗೆ ಎಲ್ಲರೂ ಭೇಷ್ ಎಂದಿದ್ದಾರೆ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!