June 25, 2026
Thursday, June 25, 2026
spot_img

ದಿನಭವಿಷ್ಯ: ಬೇರೆಯವರನ್ನು ಮೆಚ್ಚಿಸುವ ಪ್ರಯತ್ನ ಬೇಡ, ನಿಮ್ಮ ಕೆಲಸ ನೀವು ಮಾಡಿ ಸಾಕು

ಮೇಷ
ನಿಮ್ಮ ನಡೆ ಕೆಲವರಿಗೆ ತಪ್ಪರ್ಥ ಮೂಡಿಸಬಹುದು. ಅಸಮಾಧಾನ ತರುವ ಬೆಳವಣಿಗೆ. ಆಪ್ತ ಬಂಧು ಭೇಟಿಯಿಂದ ಸಮಾಧಾನ.      
ವೃಷಭ
ಕೆಲಸದಲ್ಲಿ ಅಧಿಕ ಒತ್ತಡ. ತಾಳ್ಮೆಯ ವರ್ತನೆ ಅಗತ್ಯ. ಇತರರ ಪ್ರಲೋಭನೆಗೆ ಒಳಗಾಗಿ ವರ್ತಿಸಬೇಡಿ. ಶೀತ, ಜ್ವರದ ಸಮಸ್ಯೆ ಕಾಡಬಹುದು.        
ಮಿಥುನ
ಕೆಲದಿನಗಳ ಒತ್ತಡ ನಿವಾರಣೆ. ಮನಸ್ಸಿಗೆ ನಿರಾಳತೆ. ಕೆಲವು ಬೆಳವಣಿಗೆ ಅದಕ್ಕೆ ಕಾರಣ. ಆಪ್ತರ ಜತೆ ಮಾತುಕತೆ ನೆಮ್ಮದಿ ತರಲಿದೆ.        
ಕಟಕ
ಆರ್ಥಿಕ ಪ್ರಗತಿ ಉತ್ತಮ. ಆದರೆ ಆಪ್ತರ ಜತೆ ಭಿನ್ನಾಭಿಪ್ರಾಯ ಉಂಟಾದೀತು. ಸ್ನೇಹಿತ ನಿಮ್ಮ ವಿರೋಧಿಯಾಗಿ
ಬದಲಾಗಬಹುದು.                    
ಸಿಂಹ
ಅನ್ಯರ ಮೆಚ್ಚಿಸಲು ಅನವಶ್ಯ ಪ್ರಯತ್ನ ಬೇಡ. ನಿಮ್ಮ ಕಾರ್ಯ ನಿಷ್ಠೆಯಿಂದ ಮಾಡಿ. ಕೌಟುಂಬಿಕ ಬಿಕ್ಕಟ್ಟು ಪರಿಹಾರ ಕಷ್ಟವಾದೀತು.                
ಕನ್ಯಾ
ಮನಸ್ಸಿಗೆ ನಿರಾಳತೆ ತರುವಂತಹ ಬೆಳವಣಿಗೆ. ಕಾರ್ಯ ಸಾಫಲ್ಯ, ವಿರಸ ಮುಕ್ತಿ.  ಅನಿರೀಕ್ಷಿತ ಖರ್ಚು ಬಂದೀತು. ಆತ್ಮೀಯ ಬಂಧು ಭೇಟಿ.        
ತುಲಾ
ನಡೆನುಡಿಯಲ್ಲಿ ಎಚ್ಚರ ವಹಿಸಿ. ಜಗಳಕ್ಕೆ ಆಸ್ಪದ ಕೊಡಬೇಡಿ. ಗೌರವಕ್ಕೆ ಕುಂದು ತರುವ ಬೆಳವಣಿಗೆ ಸಂಭವಿಸಬಹುದು.        
ವೃಶ್ಚಿಕ
ಜೀವನದ ಹೊಸ ಪಾಠ ಕಲಿಯುವಂತಹ ಪ್ರಸಂಗ ಸಂಭವ. ಬಿಕ್ಕಟ್ಟು ಎದುರಾದರೂ ಬಳಿಕ ಪರಿಹಾರ ಕಂಡು ನೆಮ್ಮದಿ ಉಂಟಾಗಲಿದೆ.          
ಧನು
ನಿಮ್ಮ ನಿರ್ಧಾರ ಬೇರೆಯವರ ಮೇಲೆ ಹೇರಬೇಡಿ. ಅದು ವಿರಸಕ್ಕೆ ಹೇತುವಾದೀತು.ಕೌಟುಂಬಿಕ ಶಾಂತಿಗೆ ಭಂಗ. ಆರ್ಥಿಕ ಕೊರತೆ.    
ಮಕರ
ನಿಮ್ಮ ಪಾಲಿಗೆ ಮಹತ್ವದ ದಿನ.ಬಯಸಿದ ಬೆಳವಣಿಗೆ ಸಂಭವ. ದೊಡ್ಡ ಸಮಸ್ಯೆಯೊಂದು ನಿವಾರಣೆ, ಕೆಲಸ ಸುಲಲಿತ. ಧನಪ್ರಾಪ್ತಿ.                  
ಕುಂಭ
ಪ್ರಮುಖ ವಿಷಯದಲ್ಲಿ ನಿಮ್ಮ ನಿಲುವು ಬದಲಿಸುವ ಸನ್ನಿವೇಶ ಉಂಟಾದೀತು. ದುಡುಕಿನ ನಿರ್ಧಾರ ತಾಳದಿರಿ. ಎಲ್ಲರ ಜತೆ ಸೌಹಾರ್ದತೆ ಇರಲಿ.        
ಮೀನ
ಈ ದಿನ ಪ್ರಗತಿ ಸಾಽಸಿದರೂ ನಿಮಗೆ ಮಾತ್ರ ತೃಪ್ತಿಯಿಲ್ಲ. ನಿಮ್ಮ ಮನಸ್ಸು ಬೇರೇನನ್ನೋ ಬಯಸುತ್ತದೆ. ಮನೆಯಲ್ಲಿ  ಕಲಹವಾದೀತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !