September 28, 2026
Monday, September 28, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ 7 | ಮಿಕ್ಸಿ ಬಳಸೋದೇ ಬೇಡ, ಸಿಂಪಲ್‌ ಆಗಿ ಮಾಡಿ ವೆಜಿಟೇಬಲ್‌ ರೈಸ್‌ ಬಾತ್‌

ಸಾಮಾಗ್ರಿಗಳು
ಈರುಳ್ಳಿ
ಟೊಮ್ಯಾಟೊ
ಬೀನ್ಸ್
ಕ್ಯಾರೆಟ್‌
ಆಲೂಗಡ್ಡೆ
ಬೀಟ್ರೂಟ್
ಚಕ್ಕೆ-ಲವಂಗ-ಏಲಕ್ಕಿ-ಪಲಾವ್‌ ಎಲೆ
ಖಾರದಪುಡಿ
ಸಾಂಬಾರ್‌ ಪುಡಿ
ಗರಂ ಮಸಾಲಾ
ಬಿರಿಯಾನಿ ಪುಡಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್

ಮಾಡುವ ವಿಧಾನ
ಮೊದಲು ಕುಕ್ಕರ್‌ಗೆ ಎಣ್ಣೆ, ತುಪ್ಪ ಹಾಕಿ. ಚಕ್ಕೆ, ಲವಂಗ ಹಾಗೂ ಏಲಕ್ಕಿ ಹಾಕಿ ಬಾಡಿಸಿ, ಪಲಾವ್‌ ಎಲೆ ಹಾಕಿ
ಆನಂತರ ಈರುಳ್ಳಿ ಹಾಕಿ ಬಾಡಿಸಿ, ಉಪ್ಪು ಹಾಕಿ, ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್‌ ಹಾಕಿ
ಆಮೇಲೆ ಟೊಮ್ಯಾಟೊ ಹಾಕಿ ಬಾಡಿಸಿ, ಅರಿಶಿಣ ಪುಡಿ ಹಾಕಿ, ಪುದೀನ ಕೊತ್ತಂಬರಿ ಸೊಪ್ಪು ಹಾಕಿ
ಆನಂತರ ತರಕಾರಿಗಳನ್ನು ಹಾಕಿ ಮಿಕ್ಸ್‌ ಮಾಡಿ, ಕಡೆಗೆ ಸಾಂಬಾರ್‌ ಪುಡಿ, ಖಾರದ ಪುಡಿ, ಬಿರಿಯಾನಿ ಪುಡಿ ಹಾಕಿ ಮಿಕ್ಸ್‌ ಮಾಡಿ
ನಂತರ ಇದಕ್ಕೆ ಒಂದು ಕಪ್‌ ಅಕ್ಕಿ ಹಾಕಿ, ಎರಡು ಕಪ್‌ ನೀರು ಹಾಕಿ ಎರಡು ವಿಶಲ್‌ ಕೂಗಿಸಿದ್ರೆ ವೆಜಿಟೇಬಲ್‌ ರೈಸ್‌ ಬಾತ್‌ ರೆಡಿ

Must Read