CINEMA | ಸಿನಿಮಾ ನೋಡ್ತಾ ಟೈಮ್ ವೇಸ್ಟ್ ಆಯ್ತು ಅನ್ಕೋಬೇಡಿ, ಇದರಿಂದ ಆರೋಗ್ಯಕ್ಕೂ ಲಾಭ ಇದೆ..

ಸಿನಿಮಾ ನೋಡ್ತಾ ಕೂತ್ರೆ ಹಗಲು, ರಾತ್ರಿ ಯಾವುದು ಅಂತಲೂ ಗೊತ್ತಾಗೋದಿಲ್ಲ. ಸುಮ್ಮನೆ ಟೈಮ್ ವೇಸ್ಟ್ ಬೆಳಗ್ಗೆ ಕಣ್ಣುರಿ, ಇಷ್ಟೆಲ್ಲಾ ಸಮಯ ಸಿನಿಮಾ ಮೇಲೆ ಇನ್ವೆಸ್ಟ್ ಮಾಡಿದ್ವಿ ಆದರೆ ಫಿಲ್ಮ್ ಚೆನ್ನಾಗಿಲ್ಲ, ಹೀಗೆ ಸಾಕಷ್ಟು ಭಿನ್ನ, ವಿಭಿನ್ನ ಅಭಿಪ್ರಾಯಗಳು ಎಲ್ಲರ ಮನಸಿನಲ್ಲಿಯೂ ಇದೆ, ಸಿನಿಮಾ ನೋಡಿದ್ದಕ್ಕೆ ಬೇಜಾರಾಗ್ಬೇಡಿ, ಅದರಿಂದಲೂ ಆರೋಗ್ಯಕ್ಕೆ ಸಾಕಷ್ಟು ಲಾಭ ಇದೆ ನೋಡಿ..

  • ಒಟ್ಟಾರೆ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವುದು
  • ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಉದಾಹರಣೆಗೆ ದೆವ್ವದ ಸಿನಿಮಾ ನೋಡೋರಿಗೆ ಬಿಳಿ ರಕ್ತ ಕಣಗಳು ಹೆಚ್ಚಾಗುತ್ತವೆ.
  • ಹೊರಗಿನ ಜೀವನದಲ್ಲಿ ಎಷ್ಟೇ ಒತ್ತಡ ಇರಲಿ, ಸಿನಿಮಾ ನೋಡಿದರೆ ನಿಮ್ಮ ಒತ್ತಡ ಸದ್ಯಕ್ಕಂತೂ ನಿವಾರಣೆಯಾಗುತ್ತದೆ.
  • ಕುಟುಂಬಗಳು ಸಿನಿಮಾ ಹೆಸರಲ್ಲಿ ಒಟ್ಟಾಗಿ ಕಾಲ ಕಳೆಯಬಹುದು, ಇದು ನಿಮ್ಮಲ್ಲಿ ಖುಷಿ ಹೆಚ್ಚಿಸಿ, ದೀರ್ಘ ಆಯಸ್ಸು ನೀಡುತ್ತದೆ.
  • ಕೆಲವೊಂದು ಸಿನಿಮಾಗಳು ನಿಮ್ಮ ಮೇಲೆ ಬೀರುವ ಪರಿಣಾಮ, ನಿಮ್ಮ ಜೀವನವನ್ನೇ ಬದಲಾಯಿಸುತ್ತವೆ. ನೀವು ಇನ್ನೂ ಉತ್ತಮರಾಗಬಹುದು.
  • ಹೊಸ ವಿಷಯಗಳನ್ನು ಕಲಿಯಲು, ಹೊಸತರ ಬಗ್ಗೆ ಆಸಕ್ತಿ ಹುಟ್ಟಲು ಸಿನಿಮಾಗಳು ಸಹಾಯ ಮಾಡುತ್ತದೆ.
  • ಮಕ್ಕಳಿಗೆ ಕೆಲವೊಂದು ಉತ್ತಮ ಸಿನಿಮಾಗಳು ಕ್ರಿಯೇಟಿವ್ ಆಗೋಕೆ ಸಹಾಯ ಮಾಡುತ್ತವೆ.
  • ಕೆಲವೊಂದು ಸನ್ನಿವೇಶಗಳನ್ನು ಹೇಗೆ ಡೀಲ್ ಮಾಡೋದು ಎಂದು ತಲೆಕೆಡಿಸಿಕೊಂಡಾಗ ಸಿನಿಮಾಗಳಿಂದ ಉತ್ತರ ಸಿಕ್ಕು ನಿಮ್ಮ ಜೀವನ ಸರಳ ಆಗುತ್ತದೆ.
  • ರಿಯಾಲಿಟಿ ಎಷ್ಟೇ ಕೆಟ್ಟದಾಗಿರಲಿ, ಎರಡು ಗಂಟೆಗಳ ಕಾಲ ರಿಯಾಲಿಟಿ ಮರೆತು ಎಂಜಾಯ್ ಮಾಡುವಂತೆ ಮಾಡೋದು ಸಿನಿಮಾ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!