Tuesday, December 6, 2022

Latest Posts

ಆಫೀಸ್ ಕೆಲಸಕ್ಕೆ ಬೆಂಗಳೂರಿಗೆ ಹೋದ ವ್ಯಕ್ತಿ ನಾಪತ್ತೆ: ದೂರು ದಾಖಲು

ಹೊಸದಿಗಂತ ವರದಿ ಅಂಕೋಲಾ:

ಆಫೀಸ್ ಕೆಲಸಕ್ಕೆ ಹೋಗಿ ಬರುವುದಾಗಿ ತಾನು ವಾಸಿಸುತ್ತಿದ್ದ ಸೋದರ ಮಾವನ ಮನೆಯಿಂದ ಹೊರಗೆ ಹೋಗಿದ್ದ ಯುವಕ ಮರಳಿ ಬರದೇ ಕಾಣೆಯಾಗಿರುವ ಕುರಿತು ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿದೆ.

ಹಾಸನ ಜಿಲ್ಲೆಯ ಬೇಲೂರು ನಿವಾಸಿ ಹಾಲಿ ಪಟ್ಟಣದ ಕಾಕರಮಠದಲ್ಲಿ ವಾಸವಾಗಿದ್ದ ಪುನೀತ ವಿಷ್ಣು ಭಟ್ಟ (30) ಕಾಣೆಯಾದ ಈತ ನವಂಬರ್ 12ರಂದು ಬೆಳಿಗ್ಗೆ ತಾನು ಕೆಲಸ ಮಾಡುತ್ತಿದ್ದ ಬೆಂಗಳೂರಿನ ಕಂಪನಿಯ ಕೆಲಸಕ್ಕೆ ಹೋಗಿ ಬರುವುದಾಗಿ ತಿಳಿಸಿ ಮಾವನ ಮನೆಯಿಂದ ಹೋದವನು ಇದುವರೆಗೆ ಸಂಪರ್ಕಕ್ಕೆ ಸಿಗದೇ ಕಾಣೆಯಾಗಿರುವುದಾಗಿ ಯುವಕನ ಸೋದರ ಮಾವ ಕಾಕರಮಠ ವಿಠ್ಠಲ ಸದಾಶಿವ ದೇವಸ್ಥಾನದ ಅರ್ಚಕ ಸುರೇಶ್ಚಂದ್ರ ಪಾಂಡುರಂಗ ಬಾಟೆ ಎನ್ನುವವರು ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!