August 15, 2026
Saturday, August 15, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ 39 | ಇನ್‌ಸ್ಟಂಟ್ ಬ್ರೇಕ್‌ಫಾಸ್ಟ್: ಕೇವಲ 10 ನಿಮಿಷಗಳಲ್ಲಿ ಮಾಡಿ ಈ ಮೃದುವಾದ ದೋಸೆ!

ಬೆಳಗಿನ ಗಡಿಬಿಡಿಯಲ್ಲಿ ತಕ್ಷಣಕ್ಕೆ ಮಾಡಬಹುದಾದ ಅತ್ಯಂತ ಸುಲಭ ಮತ್ತು ಆರೋಗ್ಯಕರ ತಿಂಡಿ ಎಂದರೆ ಇನ್‌ಸ್ಟಂಟ್ ಗೋಧಿ ಹಿಟ್ಟಿನ ದೋಸೆ. ಮನೆಯಲ್ಲಿ ದೋಸೆ ಹಿಟ್ಟು ಇಲ್ಲದಿದ್ದಾಗ, ಕೇವಲ 10 ನಿಮಿಷಗಳಲ್ಲಿ ಯಾವುದೇ ಮುಂಚಿತ ತಯಾರಿ ಇಲ್ಲದೆ ಈ ಮೃದುವಾದ ದೋಸೆಯನ್ನು ಸಿದ್ಧಪಡಿಸಬಹುದು.

ಬೇಕಾಗುವ ಸಾಮಗ್ರಿಗಳು

ಗೋಧಿ ಹಿಟ್ಟು

ಸಣ್ಣಗೆ ಹೆಚ್ಚಿದ ಈರುಳ್ಳಿ

ಜೀರಿಗೆ

ಹಸಿಮೆಣಸಿನಕಾಯಿ

ಕೊತ್ತಂಬರಿ ಸೊಪ್ಪು

ಕರಿಬೇವಿನ ಎಲೆ

ಉಪ್ಪು

ನೀರು

ಎಣ್ಣೆ ಅಥವಾ ತುಪ್ಪ

ಮಾಡುವ ವಿಧಾನ:

ಒಂದು ದೊಡ್ಡ ಬೌಲ್‌ಗೆ 1.5 ಕಪ್ ಗೋಧಿ ಹಿಟ್ಟು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಒಮ್ಮೆ ಒಣದಾಗಿಯೇ ಮಿಕ್ಸ್ ಮಾಡಿ. ಈಗ ಇದಕ್ಕೆ ಸ್ವಲ್ಪ ಸ್ವಲ್ಪವೇ ನೀರನ್ನು ಸೇರಿಸುತ್ತಾ, ಗಂಟುಗಳು ಇಲ್ಲದಂತೆ ಚೆನ್ನಾಗಿ ಕೈಯಾಡಿಸಿ.ಹಿಟ್ಟಿನ ಹದವು ಸಾಮಾನ್ಯ ದೋಸೆ ಹಿಟ್ಟಿಗಿಂತ ಸ್ವಲ್ಪ ತೆಳುವಾಗಿರಬೇಕು.

ನಂತರ ಸಿದ್ಧಪಡಿಸಿದ ಹಿಟ್ಟಿಗೆ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ, ಜೀರಿಗೆ, ಕೊತ್ತಂಬರಿ ಸೊಪ್ಪು ಮತ್ತು ಕರಿಬೇವಿನ ಎಲೆಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ದೋಸೆ ತವಾವನ್ನು ಮಧ್ಯಮ ಉರಿಯಲ್ಲಿ ಚೆನ್ನಾಗಿ ಕಾಯಿಸಿ. ತವಾ ಕಾದ ನಂತರ ಸ್ವಲ್ಪ ಎಣ್ಣೆ ಸವರಿ, ಒಂದು ದೊಡ್ಡ ಸೌಟು ಹಿಟ್ಟನ್ನು ತಗೆದುಕೊಂಡು ತವಾದ ಮಧ್ಯದಲ್ಲಿ ಹಾಕಿ ಲಘುವಾಗಿ ವೃತ್ತಾಕಾರದಲ್ಲಿ ಹರಡಿ, ದೋಸೆಯ ಸುತ್ತಲೂ ಮತ್ತು ಮೇಲ್ಭಾಗದಲ್ಲಿ ಅರ್ಧ ಚಮಚ ಎಣ್ಣೆ ಅಥವಾ ತುಪ್ಪವನ್ನು ಹಾಕಿ. ಎರಡು ಬದಿಗಳು ಮೃದುವಾಗಿ ಬೆಂದ ನಂತರ ದೋಸೆಯನ್ನು ತವಾದಿಂದ ತೆಗೆದರೆ, ಮೃದುವಾದ ಇನ್‌ಸ್ಟಂಟ್ ಗೋಧಿ ಹಿಟ್ಟಿನ ದೋಸೆ ಸಿದ್ಧ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !