Wednesday, December 7, 2022

Latest Posts

ದೂದ್ ಪೇಡಾ ದಿಗಂತ್ ನ ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾಗೆ ಸಿಕ್ಕಿದ್ರು ಹೊಸ ಹೀರೋಯಿನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಗಾಳಿಪಟ 2 ಸಿನಿಮಾದ ಯಶಸ್ಸಿನ ಖುಷಿಯಲ್ಲಿರೋ ದೂದ್ ಪೇಡಾ ದಿಗಂತ್ ಮತ್ತೊಂದು ಸಿನಿಮಾವೊಂದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ‘ಎಡಗೈಯೇ ಅಪಘಾತಕ್ಕೆ ಕಾರಣ’ ಎಂಬ ಟೈಟಲ್ ಹೊಂದಿರುವ ಚಿತ್ರತಂಡ ಇಂದು ‘ವಿಶ್ವ ಎಡಚರ ದಿನ’ದ (ಎಡಗೈಯನ್ನು ಹೆಚ್ಚಾಗಿ ಬಳಸುವವರು) ಅಂಗವಾಗಿ ಚಿತ್ರತಂಡ ನಾಯಕಿಯನ್ನು ಪರಿಚಯ ಮಾಡಿಕೊಟ್ಟಿದೆ.
ಈ ಚಿತ್ರದಲ್ಲಿ ನೂತನ ನಟಿ ಧನು ಹರ್ಷ ನಾಯಕಿಯಾಗಿ ಅಭಿನಯಿಸುತ್ತಿದ್ದು, ಚಿತ್ರತಂಡ ಇಂದು ಆಕೆಯ ಫಸ್ಟ್ ಲುಕ್ ಬಿಡುಗಡೆ ಮಾಡಿದೆ. ಈ ಚಿತ್ರದ ಮೂಲಕ ಧನು ಹರ್ಷ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಪ್ರವೇಶ ಮಾಡಿದ್ದು, ಅವರ ಇಂಟ್ರೊಡಕ್ಷನ್ ಟೀಸರ್ ಕೂಡ ಇಂದು ಬಿಡುಗಡೆ ಆಗಿದೆ.
ನಾನು ಈ ಚಿತ್ರದಲ್ಲಿ ರಾಧಿಕಾ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ‘ಎಡಗೈ’ ಆಧಾರಿತ ಪರಿಕಲ್ಪನೆ ಸಿನಿಮಾ ಇದಾಗಿದ್ದು, ನನ್ನ ಪಾತ್ರ ಕೂಡ ವಿಶೇಷವಾಗಿದೆ. ನಾನು ಡಿಫರೆಂಟ್ ಶೇಡ್​ನಲ್ಲಿ ಕಾಣಿಸಿಕೊಳ್ಳಲಿರುವುದಾಗಿ ಧನು ಹೇಳಿದ್ದಾರೆ.
ಸಮರ್ಥ್ ಬಿ. ಕಡ್ಕೋಲ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಆಗಸ್ಟ್ ಅಂತ್ಯದಲ್ಲಿ ಶೂಟಿಂಗ್ ಶುರುವಾಗಲಿದೆ. ನಿ
ರ್ದೇಶಕ ಗುರುದತ್ತ ಗಾಣಿಗ ಮತ್ತು ಸಮರ್ಥ ಕಡ್ಕೋಳ್ ಜಂಟಿಯಾಗಿ ನಿರ್ಮಿಸಿರುವ ಚಿತ್ರಕ್ಕೆ ಅಭಿಮನ್ಯು ಸದಾನಂದ್ ಛಾಯಾಗ್ರಹಣವಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!