80 ರ ವೃದ್ದೆಯಲ್ಲಿ ಕಂಡಿತು 75 ರ ಸ್ವಾತಂತ್ರ್ಯ ಮಹೋತ್ಸವದ ಸಂಭ್ರಮ

ಹೊಸದಿಗಂತ ವರದಿ,ಕುಮಟಾ:

ಭಾರತ ಸ್ವಾತಂತ್ರ್ಯ ಪಡೆದ ಅಮೃತ ಮಹೋತ್ಸವದ ಸಂಭ್ರಮದಲ್ಲಿ ಇದ್ದಾಗ ಕುಮಟಾ ನಗರದ ಹೆರವಟ್ಟದ ೮೦ ವರ್ಷದ ಮಾತೆಯೋರ್ವರು ಭಾರತದ ತ್ರಿವರ್ಣ ಧ್ವಜವನ್ನು ಹಿಡಿದು ಸಂಭ್ರಮಿಸಿದರು.
ಪಾರ್ವತಿ ಭಾಸ್ಕರ ಹೆಗಡೆ (೮೦) ಅವರು ಭಾರತ ಸ್ವಾತಂತ್ರ್ಯ ಸಂಭ್ರಮವನ್ನು ಆಚರಿಸುವ ವೇಳೆಯ ಖುಷಿಯನ್ನು‌ ತಮ್ಮ ಎಳೆಯ ಮನಸ್ಸಿನಲ್ಲಿ ಅಚ್ಚೊತ್ತುಕೊಂಡ ಸಂಗತಿಯನ್ನು ಬಿಚ್ಚಿಟ್ಟರು. ಭಾಷಣಕ್ಕೆ ಬಂದಿದ್ದ ಗಾಂಧಿಜಿ ಅವರನ್ನು ನೋಡಲು ಚಂದಾವರದಿಂದ ಕುಮಟಾ ಕ್ಕೆ ಎಂಟು ಕಿಮಿ ನಡೆದು ಹೋಗಿದ್ದನ್ನೂ ನೆನಪಿಸಿಕೊಂಡರು.

ಸ್ವಾತಂತ್ರ್ಯ ಅಮೃತ ಮಹೋತ್ಸವ ಹರ್ ಘರ್ ತಿರಂಗಾ ಖುಷಿಯಲ್ಲಿ ಧ್ವಜ ಹಾರಿಸಿ ಧ್ಚಜವಂದನೆ ನಡೆಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!