ಲೋಕಸಭಾ ಚುನಾವಣೆ 2024 | ಇಂದು ಮನೆಮನೆಗೆ ತೆರಳಿ ಮತಯಾಚನೆಗೆ ಅವಕಾಶ, ರೂಲ್ಸ್‌ ಏನಿದೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಾಳೆ ರಾಜ್ಯದಲ್ಲಿ ಮೊದಲ ಹಂತದ ಚುನಾವಣೆಯ ಮತದಾನ ಆರಂಭವಾಗಲಿದೆ. ನಿನ್ನೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಇಂದು ಮನೆ ಮನೆಗೆ ತೆರಳಿ ಮತಬೇಟೆ ನಡೆಸಲು ಅವಕಾಶವಿದೆ. ಇದು ಜನರ ಮನವೊಲಿಸುವ ಕಡೆಯ ಪ್ರಯತ್ನವಾಗಿದ್ದು, ಅಭ್ಯರ್ಥಿಗಳು ಕಿಂಚಿತ್ತೂ ಸಮಯ ಹಾಳು ಮಾಡದೆ ಪ್ರಚಾರಕ್ಕೆ ಇಳಿದಿದ್ದಾರೆ.

ಮನೆ ಮನೆ ಪ್ರಚಾರದ ವೇಳೆ ಈ ರೀತಿ ಮಾಡುವಂತಿಲ್ಲ..

ಮನೆ ಮನೆ ಪ್ರಚಾರದ ವೇಳೆ ಅಭ್ಯರ್ಥಿ ಜೊತೆ ಐದು ಜನಕ್ಕಿಂತ ಹೆಚ್ಚು ಇರಬಾರದು.

ಮನೆಗಳಿಗೆ ತೆರಳುವಾಗ ಶಾಂತವಾಗಿರಬೇಕು, ಧ್ವನಿವರ್ಧಕಗಳ ಬಳಕೆ ಮಾಡುವಂತಿಲ್ಲ.

ಆಯಾ ಕ್ಷೇತ್ರದ ಅಭ್ಯರ್ಥಿಗಳನ್ನು ಬಿಟ್ಟು ಇತರ ಕ್ಷೇತ್ರಕ್ಕೆ ಸಂಬಂಧಪಡದ ವ್ಯಕ್ತಿಗಳು ಕಾಣಿಸಿಕೊಳ್ಳುವಂತಿಲ್ಲ.

ಮತದಾನಕ್ಕೂ 48 ಗಂಟೆ ಮೊದಲು ಶೂನ್ಯ ಅವಧಿ ಹಿನ್ನೆಲೆ ಯಾವುದೇ ರೀತಿ ಅಬ್ಬರದ ಪ್ರಚಾರ ನಡೆಸುವಂತಿಲ್ಲ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!