ಗುಡ್ ಬೈ ಕ್ವೀನ್: ಐದು ದಶಕಗಳ ಕಾಲ ಆಗಸವನ್ನು ಆಳಿದ್ದ ಮಹಾರಾಣಿಗೆ ಭಾವುಕ ವಿದಾಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಂದೊಮ್ಮೆ ರಾಷ್ಟ್ರಪತಿಗಳು, ಉಪರಾಷ್ಟ್ರಪತಿ, ಪ್ರಧಾನಿಗಳಂತಹಾ ವಿವಿಐಪಿಗಳನ್ನು ಸುರಕ್ಷಿತವಾಗಿ ಹೊತ್ತೊಯ್ಯುತ್ತಿದ್ದ ಏರ್ ಇಂಡಿಯಾದ ಬೋಯಿಂಗ್ 747 ವಿಮಾನ ತನ್ನ ಹಾರಾಟವನ್ನು ಅಧಿಕೃತವಾಗಿ ನಿಲ್ಲಿಸಿದೆ.

ವಿಮಾನ ಮುಂಬೈನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಮೆರಿಕದ ಪೇನ್‌ಫೀಲ್ಡ್‌ಗೆ ತನ್ನ ಕೊನೆಯ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಈ ಸುಂದರಿ ಆಗಸಕ್ಕೆ ನೆಗೆಯುತ್ತಿದ್ದರೆ ಅಲ್ಲಿದ್ದವರು ಅಕ್ಷರಶಃ ಭಾವುಕರಾದರು.

ಕ್ವೀನ್ ಆಫ್ ಸ್ಕೈಸ್ ಎಂದೇ ಹೆಸರಾಗಿರುವ ಈ ವಿಮಾನ, 1968 ಮೊದಲಬಾರಿಗೆ ತಯಾರಾಗಿತ್ತು. ಪರೀಕ್ಷೆಯ ಬಳಿಕ 1969ರ ಫೆಬ್ರವರಿ 9 ರಂದು ತನ್ನ ಮೊದಲ ಹಾರಾಟವನ್ನು ನಡೆಸಿತು. ಬೋಯಿಂಗ್ ಸಂಸ್ಥೆ ತನ್ನ ಮೊದಲ ಬೋಯಿಂಗ್ 747 ವಿಮಾನವನ್ನು 1971 ರ ಮಾರ್ಚ್ 22ರಂದು ಏರ್ ಇಂಡಿಯಾಕ್ಕೆ ವಿತರಿಸಿತ್ತು. ಈ ವಿಮಾನದಲ್ಲಿ 16 ಪ್ರಥಮ ದರ್ಜೆ ಸೀಟ್, 40 ಬಿಸಿನೆಸ್ ಕ್ಲಾಸ್ ಸೀಟುಗಳಿದ್ದವು. ವಿಶೇಷವೆಂದರೆ ಈ ವಿಮಾನವನ್ನು ಮೂರು ಪೈಲೆಟ್‌ಗಳು ಜೊತೆಯಾಗಿ ಚಲಾಯಿಸುತ್ತಾರೆ. ಮೊದಲನೆಯವರು ಕ್ಯಾಪ್ಟನ್, ಎರಡನೆಯವರು ಫ್ಲೈಟ್ ಆಫೀಸರ್ ಹಾಗೂ ಮೂರನೆಯವರು ಫ್ಲೈಟ್ ಇಂಜಿನಿಯರ್.

ಏರ್ ಇಂಡಿಯಾ ಬಳಿ ಒಟ್ಟು ನಾಲ್ಕು ಬೋಯಿಂಗ್ 747 ವಿಮಾನಗಳಿದ್ದು, ನಾಲ್ಕು ವರ್ಷಗಳ ಹಿಂದೆಯೇ ಇದರ ಹಾರಾಟ ಸ್ಥಗಿತಗೊಳಿಸಲಾಗಿತ್ತು. ಇದೀಗ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಮೆರಿಕಗೆ ಪ್ರಯಾಣ ಬೆಳೆಸುವ ಮೂಲಕ ಈ ವಿಮಾನಗಳ ಯುಗಾಂತ್ಯವಾಗಿದೆ.
ಈ ವಿಮಾನಗಳ ಅಂತಿಮ ವಿದಾಯಕ್ಕಾಗಿ, ಪೈಲಟ್‌ಗಳು ’ವಿಂಗ್ ವೇವ್’ ಅನ್ನು ಪ್ರದರ್ಶಿಸಿದ್ದು, ಇದು ವಿಮಾನದ ನಿವೃತ್ತಿ ಅಥವಾ ಅಂತಿಮ ಪ್ರಯಾಣದ ಸಂಕೇತವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!