July 26, 2026
Sunday, July 26, 2026
spot_img

ಭಾರತದ ರೋಯಿಂಗ್ ಸಾಧನೆಗೆ ಡೋಪಿಂಗ್ ಕಳಂಕ: ಅಥ್ಲೀಟ್ ನ ಚಿನ್ನದ ಪದಕ ವಾಪಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ರೋಯಿಂಗ್ ಇತಿಹಾಸದಲ್ಲೇ ಮೊದಲ ಬಾರಿಗೆ ಗೆದ್ದಿದ್ದ ವಿಶ್ವಕಪ್ ಚಿನ್ನದ ಪದಕ ಇದೀಗ ಡೋಪಿಂಗ್ ಪ್ರಕರಣದಿಂದ ಸಂಕಷ್ಟಕ್ಕೆ ಸಿಲುಕಿದೆ.

ಲುಸೆರ್ನ್‌ನಲ್ಲಿ ನಡೆದ ರೋಯಿಂಗ್ ವಿಶ್ವಕಪ್‌ನ ಲೈಟ್‌ವೇಟ್ ಡಬಲ್ಸ್ ಸ್ಕಲ್ಸ್ ವಿಭಾಗದಲ್ಲಿ ಚಿನ್ನ ಗೆದ್ದಿದ್ದ ಭಾರತೀಯ ಜೋಡಿಯ ಸದಸ್ಯ ಲಕ್ಶಯ್ ಅವರ ಡೋಪಿಂಗ್ ಪರೀಕ್ಷೆ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಐತಿಹಾಸಿಕ ಗೆಲುವು ದಾಖಲೆಗಳಿಂದ ಅಳಿಸಿಹಾಕುವ ಸಾಧ್ಯತೆ ಎದುರಾಗಿದೆ.

ನಿಷೇಧಿತ ಪದಾರ್ಥ ಪತ್ತೆ

ಮೇ 25ರಂದು ಸ್ಪರ್ಧೆಗೂ ಮುನ್ನ ನಡೆಸಲಾದ ಔಟ್-ಆಫ್-ಕಾಂಪಿಟಿಷನ್ ಪರೀಕ್ಷೆಯಲ್ಲಿ ಲಕ್ಶಯ್ ಅವರ ಮಾದರಿಯಲ್ಲಿ ನಿಷೇಧಿತ ಸ್ಟಾನೊಝೋಲಾಲ್ (Stanozolol) ಪತ್ತೆಯಾಗಿದೆ. ಇದರ ಬೆನ್ನಲ್ಲೇ ರಾಷ್ಟ್ರೀಯ ಡೋಪಿಂಗ್ ವಿರೋಧಿ ಸಂಸ್ಥೆ (NADA) ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ.

ಚಿನ್ನದ ಪದಕಕ್ಕೆ ಸಂಕಷ್ಟ

ಜೂನ್‌ನಲ್ಲಿ ಸ್ವಿಟ್ಜರ್‌ಲ್ಯಾಂಡ್‌ನ ಲುಸೆರ್ನ್‌ನಲ್ಲಿ ಉಜ್ವಲ್ ಕುಮಾರ್ ಸಿಂಗ್ ಜೊತೆಗೂಡಿ ಲಕ್ಶಯ್ ಚಿನ್ನದ ಪದಕ ಗೆದ್ದು ಭಾರತದ ಮೊದಲ ರೋಯಿಂಗ್ ವಿಶ್ವಕಪ್ ಚಾಂಪಿಯನ್‌ಗಳಾಗಿ ಹೊರಹೊಮ್ಮಿದ್ದರು. ಆದರೆ ಡೋಪಿಂಗ್ ನಿಯಮಗಳ ಪ್ರಕಾರ ಮೇ 25ರ ಬಳಿಕದ ಅವರ ಎಲ್ಲಾ ಸ್ಪರ್ಧಾ ಫಲಿತಾಂಶಗಳು ಅನರ್ಹವಾಗುವ ಸಾಧ್ಯತೆಯಿದೆ.

ಇದನ್ನೂ ಓದಿ:

ನಾಲ್ಕು ವರ್ಷಗಳ ನಿಷೇಧದ ಭೀತಿ

ಡೋಪಿಂಗ್ ಆರೋಪವನ್ನು ಸಮರ್ಥವಾಗಿ ಪ್ರಶ್ನಿಸಲು ವಿಫಲವಾದರೆ ಲಕ್ಶಯ್ ನಾಲ್ಕು ವರ್ಷಗಳವರೆಗೆ ಕ್ರೀಡೆಯಿಂದ ಅಮಾನತುಗೊಳ್ಳುವ ಸಾಧ್ಯತೆ ಇದೆ.

ಜುಡೋ ತಂಡಕ್ಕೂ ಡೋಪಿಂಗ್ ಆಘಾತ

ಇದೇ ವೇಳೆ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೂ ಮುನ್ನ ಭಾರತೀಯ ಜುಡೋ ತಂಡಕ್ಕೂ ಡೋಪಿಂಗ್ ಸಂಬಂಧಿತ ಹಿನ್ನಡೆ ಎದುರಾಗಿದೆ. ಅರುಣ್ ಕುಮಾರ್ ಡೋಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿಬಿದ್ದರೆ, ತುಲಿಕಾ ಮಾನ್ ಅವರ ವಿರುದ್ಧ ಡಬ್ಲ್ಯುಎಡಿಎ ನಿಯಮ ಉಲ್ಲಂಘನೆ ಆರೋಪ ಕೇಳಿಬಂದಿದ್ದು, ಇಬ್ಬರೂ ತಂಡದಿಂದ ಹೊರಗುಳಿದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !