IPL 2022 | ಐಪಿಎಲ್‌ ಪ್ರೇಮಿಗಳಿಂದು ಡಬಲ್‌ ಧಮಾಕ; ರಾಜಸ್ಥಾನ – ಮುಂಬೈ, ಡೆಲ್ಲಿ- ಗುಜರಾತ್‌ ಸೆಣಸಾಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಐಪಿಎಲ್‌ ನಲ್ಲಿ ಇಂದು ಡಬಲ್ ಧಮಾಕ. ಒಂದೆಡೆ ಹಬ್ಬದ ಸಂಭ್ರಮವಾದರೆ ಮತ್ತೊಂಡೆಗೆ ಐಪಿಎಲ್‌ ನ ಎರಡು ಪಂದ್ಯಗಳಲ್ಲಿ ನಾಲ್ಕು ಬಲಿಷ್ಠ ತಂಡಗಳು ಸೆಣಸಾಟವನ್ನು ಕಣ್ತುಂಬಿಕೊಳ್ಳುವ ಖುಷಿ. ಮಧ್ಯಾಹ್ನ 3.30 ಕ್ಕೆ ಮುಂಬೈನ ಡಾ. ಡಿವೈ ಪಾಟಿಲ್ ಸ್ಪೋರ್ಟ್ಸ್​ ಅಕಾಡೆಮಿಯಲ್ಲಿ ಆರಂಭವಾಗಲಿರುವ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ಜೊತೆಗೆ ಸೆಣಸಲಿದೆ.
ರಾತ್ರಿ 7.30ಕ್ಕೆ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್​ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಪಂದ್ಯದಲ್ಲಿ ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಹಾರ್ದಿಕ್ ಪಾಂಡ್ಯ ಸಾರಥ್ಯದ ಗುಜರಾತ್ ಟೈಟನ್ಸ್ಗೆ ಮುಖಾಮುಖಿಯಾಗಲಿದೆ. ಮೊದಲ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಮುಗ್ಗರಿಸಿರುವ ಮುಂಬೈ ತಂಡವು ಇಂದು ಗೆಲುವಿನ ಲಯಕ್ಕೆ ಮರಳುವ ಛಲದೊಂದಿಗೆ ಕಣಕ್ಕಿಳಿಯಲಿದೆ. ನಾಯಕ ರೋಹಿತ್ ಶರ್ಮಾ, ಪೊಲಾರ್ಡ್‌, ಟೀಮ್‌ ಡೇವಿಡ್‌ ಮಿಂಚಬೇಕಾದ ಅನಿವಾರ್ಯತೆಯಿದೆ. ಇಶಾನ್‌ ಕಿಶಾನ್‌ ಮೊದಲ ಪಂದ್ಯದಲ್ಲೇ ಅಬ್ಬರಿಸಿರುವುದು ಮ್ಯಾನೇಜ್‌ ಮೆಂಟ್‌ ಗೆ ಸಮಾಧಾನ ತಂದಿದೆ.
ರಾಜಸ್ಥಾನ್‌ ರಾಯಲ್ಸ್ ಟೂರ್ನಿಯಲ್ಲೇ ಅತ್ಯಂತ ಬಲಿಷ್ಠ ತಂಡವಾಗಿ ತೋರುತ್ತಿದೆ. ಬ್ಯಾಟಿಂಗ್‌, ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ತಂಡ ಅತ್ಯಂತ ಸಮತೋನವಾಗಿ ಕಾಣಉತ್ತಿದೆ. ಹೈದರಾಬಾದ್‌ ವಿರುದ್ಧದ ಮೊದಲ ಪಂದ್ಯದಲ್ಲಿ ನಾಯಕ ಸಂಜು ಸ್ಯಾಮ್ಸನ್‌, ಜೋಸ್ ಬಟ್ಲರ್‌, ಯಶಸ್ವಿ ಜೈಸ್ವಾಲ್‌, ದೇವದತ್ ಪಡಿಕ್ಕಲ್‌, ಹೆಟ್ಮಾಯರ್‌, ಉತ್ತಮ ಪ್ರದರ್ಶನ ನೀಡಿದ್ದರು. ಇವರನ್ನು ನಿಯಂತ್ರಿಸಲು ಮುಂಬೈ ಬೌಲರ್‌ ಗಳು ಹೆಚ್ಚಿನ ಶ್ರಮ ಹಾಕಬೇಕಿದೆ.
ಇದೀಗ ಟಾಸ್‌ ಗೆದ್ದಿರುವ ಮುಂಬೈ ಬೌಲಿಂಗ್‌ ಆಯ್ದುಕೊಂಡಿದೆ. ಮಂಬೈ ತಂಡವು ಮೊದಲ ಪಂದ್ಯದಲ್ಲಿ ಕಣಕ್ಕಿಳಿದ ತಂಡದೊಂದಿಗೆ ಆಡುತ್ತಿದೆ. ರಾಜಸ್ತಾವು ಒಂದು ಬದಲಾವನೆಯೊಂದಿಗೆ ಕಣಕ್ಕಿಳಿದಿದ್ದು, ನಾಥನ್‌ ಕೌಲ್ಟರ್‌ ನೈಲ್‌ ಬಬಲಿಗೆ ನವದೀಪ್‌ ಸೈನಿ ಆಡುತ್ತಿದ್ದಾರೆ.

ಎರಡನೇ ಪಂದ್ಯದಲ್ಲಿ ಗುಜರಾತ್ vs ಡೆಲ್ಲಿ:
ಮೊದಲ ಪಂದ್ಯದಲ್ಲಿ ಗೆಲುನ ಸವಿ ಉಂಡಿರುವ ಡೆಲ್ಲಿ ಕ್ಯಾಪಿಟಲ್ಸ್​​ ಮತ್ತು ಹೊಸ ತಂಡ ಗುಜರಾತ್​​ ಟೈಟಾನ್ಸ್​​ ಎರಡನೇ ಪಂದ್ಯದಲ್ಲಿ ಮುಖಾಮುಳಿಯಾಗಲಿವೆ. ಡೆಲ್ಲಿ ತಂಡದ ಪೃಥ್ವಿ ಶಾ, ರಿಷಭ್ ಪಂತ್, ಲಲಿತ್ ಯಾದವ್, ರೋವ್ಮನ್ ಪಾಲ್, ಅಲ್‌ರೌಂಡರ್ ಅಕ್ಷರ್ ಪಟೇಲ್ ರನ್‌ ಮಳೆ ಹರಿಸಬಲ್ಲರು. ಭಲಿಂಗ್‌ ವಿಭಾಗದಲ್ಲಿ ಶಾರ್ದೂಲ್ ಠಾಕೂರ್, ಕುಲದೀಪ್‌ ಯಾದವ್‌ ತಂಡದ ಪ್ರಮುಖ ಶಕ್ತಿಯಾಗಿದ್ದಾರೆ.
ಲಕ್ನೋ ವಿರುದ್ಧ ಐಪಿಎಲ್‌ ಪಾದಾರ್ಪಣಾ ಪಂದ್ಯದಲ್ಲೇ ಗೆದ್ದುಬೀಗಿರುವ ಗುಜರಾತ್ ತಂಡವೂ ಎರಡನೇ ಗೆಲುವನ್ನು ಎದುರು ನೋಡುತ್ತಿದೆ. ಸ್ಪಿನ್ನರ್ ರಶೀದ್ ಖಾನ್, ಹಾರ್ದಿಕ್‌ ಪಾಂಡ್ಯ, ಮಿಲ್ಲರ್‌, ರಾಹುಲ್ ತೆವಾಟಿಯಾ, ಶುಭಮನ್ ಗಿಲ್ ಬೌಲಿಂಗ್‌ ವಿಭಾಗದಲ್ಲಿ ಮೊಹಮ್ಮದ್ ಶಮಿ ಅವರಿರುವ ತಂಡ ಬಲಿಷ್ಠವಾಗಿ ಕಾಣುತ್ತಿದೆ. ಈ ಪಂದ್ಯದಲ್ಲಿ ಬ್ಯಾಟ್ಸ್‌ ಮನ್‌ ಗಳಿಂದ ರನ್‌ ಮಳೆ ಹರಿದುಬರುವ ನಿರೀಕ್ಷೆಗಳಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!