ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ನ ಜನಪ್ರಿಯ ತಾರಾ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರ ಕುಟುಂಬಕ್ಕೆ ಮತ್ತೊಂದು ಸದಸ್ಯೆಯ ಆಗಮನವಾಗಿದೆ. ದಂಪತಿ ಎರಡನೇ ಮಗುವಾಗಿ ಹೆಣ್ಣು ಮಗುವನ್ನು ಸ್ವಾಗತಿಸಿದ್ದು, ಈ ಸಂತಸದ ಸುದ್ದಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.
ಪುಟ್ಟ ಮಗುವಿನ ಪಾದದ ಗುರುತಿನ ಚಿತ್ರವನ್ನು ಪೋಸ್ಟ್ ಮಾಡೋ ಮೂಲಕ ಅಭಿಮಾನಿಗಳಿಗೆ ಸಿಹಿಸುದ್ದಿ ತಿಳಿಸಿದ್ದಾರೆ.
ಇದಕ್ಕೂ ಮೊದಲು ಸೆಪ್ಟೆಂಬರ್ 8ರಂದು ಮೊದಲ ಪುತ್ರಿ ದುವಾಳ ಎರಡನೇ ಹುಟ್ಟುಹಬ್ಬವೂ ನಡೆದಿತ್ತು. ಆ ಸಂದರ್ಭದಲ್ಲಿ ರಣವೀರ್, ದೀಪಿಕಾ ಅವರ ಗರ್ಭಾವಸ್ಥೆಯ ಅವಧಿಯ ಕೆಲವು ಅಪರೂಪದ ಕಪ್ಪು-ಬಿಳುಪು ಚಿತ್ರಗಳನ್ನು ಹಂಚಿಕೊಂಡಿದ್ದರು. ದಂಪತಿ ತಮ್ಮ ವೈಯಕ್ತಿಕ ಬದುಕಿನ ಸುಂದರ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದ ಈ ಚಿತ್ರಗಳು ಗಮನ ಸೆಳೆದಿದ್ದವು.
ಇದನ್ನೂ ಓದಿ:
ದೀಪಿಕಾ ಮತ್ತು ರಣವೀರ್ ತಮ್ಮ ಎರಡನೇ ಮಗುವಿನ ಆಗಮನದ ಸುದ್ದಿಯನ್ನು ಇದೇ ವರ್ಷ ಏಪ್ರಿಲ್ನಲ್ಲಿ ಅಧಿಕೃತವಾಗಿ ಘೋಷಿಸಿಕೊಂಡಿದ್ದರು. ಬಳಿಕ ದೀಪಿಕಾ ಅವರ ಬೇಬಿ ಬಂಪ್ನ ಫೋಟೋಶೂಟ್ ಸೇರಿದಂತೆ ಹಲವು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇದೀಗ ಹೆಣ್ಣು ಮಗುವಿನ ಆಗಮನದೊಂದಿಗೆ ಕುಟುಂಬದಲ್ಲಿ ಸಂಭ್ರಮ ಮತ್ತಷ್ಟು ಹೆಚ್ಚಾಗಿದೆ.
2018ರಲ್ಲಿ ವಿವಾಹವಾದ ದೀಪಿಕಾ ಮತ್ತು ರಣವೀರ್, 2024ರ ಸೆಪ್ಟೆಂಬರ್ 8ರಂದು ಮೊದಲ ಮಗುವಾಗಿ ದುವಾಳನ್ನು ಸ್ವಾಗತಿಸಿದ್ದರು. ಇದೀಗ ದುವಾ ಅಕ್ಕನಾಗಿದ್ದು, ಕುಟುಂಬಕ್ಕೆ ಹೊಸ ಪುಟ್ಟ ಸದಸ್ಯೆಯ ಸೇರ್ಪಡೆಯಾಗಿದೆ.



