ಮಹಾರಾಷ್ಟ್ರ ಚುನಾವಣೆ ಕುರಿತು ಅನುಮಾನ: ಚರ್ಚೆಗೆ ಬರಲು ಕಾಂಗ್ರೆಸ್ ಗೆ ಚುನಾವಣಾ ಆಯೋಗ ಆಹ್ವಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಮಹಾರಾಷ್ಟ್ರ ಚುನಾವಣೆಯ ಸಂದರ್ಭ ಎಣಿಕೆಯಾದ ಮತಗಳ ನಡುವೆ ಭಾರೀ ಅಂತರವಿದೆ ಎಂದು ಕಾಂಗ್ರೆಸ್‌ ಗಂಭೀರ ಆರೋಪ ಹೊರಿಸಿದೆ. ಆಡಳಿತಾರೂಢ ಬಿಜೆಪಿಯು ಮತ ಎಣಿಕೆಯಲ್ಲಿ ಅಕ್ರಮವೆಸಗಿದ್ದು, ಮತದಾರರ ಪಟ್ಟಿಯಿಂದ ಅನೇಕ ಮತದಾರರ ಹೆಸರನ್ನು ಅಳಿಸಲಾಗಿದೆ ಎಂದು ದೂಷಿಸಿದೆ.

ಹೀಗಾಗಿ ಈ ಕುರಿತು ಖುದ್ದಾಗಿ ಚರ್ಚಿಸಲು ಡಿ. 3ರಂದು ಕಾಂಗ್ರೆಸ್‌ ನಿಯೋಗವನ್ನು ಚುನಾವಣಾ ಆಯೋಗವು ತನ್ನ ಕಚೇರಿಗೆ ಆಹ್ವಾನಿಸಿದೆ.

ಮಹಾರಾಷ್ಟ್ರ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಭಾರಿ ಪ್ರಮಾಣದ ಪರಿಷ್ಕರಣೆ ಆಗಿರುವುದು ಅನುಮಾನ ಮೂಡಿಸಿದೆ. ಹಲವು ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದಿದ್ದರೆ, ಸಾಕಷ್ಟು ಸಂಖ್ಯೆಯಲ್ಲಿ ಮತದಾರರನ್ನು ಸೇರ್ಪಡೆ ಮಾಡಲಾಗಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಈ ಕುರಿತು ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ಕಾಂಗ್ರೆಸ್‌, ʼಮತದಾರರ ಪಟ್ಟಿಯಲ್ಲಿ ಸರಾಸರಿ 50,000ದಷ್ಟು ಮತದಾರರ ಸಂಖ್ಯೆ ಸೇರ್ಪಡೆಯಾಗಿದ್ದ 50 ಕ್ಷೇತ್ರಗಳ ಪೈಕಿ 47ರಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ಜಯಗಳಿಸಿವೆ ಎಂದು ಹೇಳಿದೆ.

ಇದೀಗ ಚುನಾವಣಾ ಅಂಕಿ ಅಂಶಗಳು ಮತ್ತು ಕರಡು ಮತದಾರರ ಪಟ್ಟಿಯಲ್ಲಿನ ವ್ಯತ್ಯಾಸಗಳನ್ನು ಉಲ್ಲೇಖಿಸಿ ಭಾರತೀಯ ಚುನಾವಣಾ ಆಯೋಗವು ಕಾಂಗ್ರೆಸ್‌ ದೂರುಗಳನ್ನು ವಜಾಗೊಳಿಸಿದೆ.

ಕಾಂಗ್ರೆಸ್‌ನ ಮೊದಲ ಆರೋಪಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಉತ್ತರಿಸಿದ್ದು, ಮತದಾರರ ಪಟ್ಟಿಯನ್ನು ಪ್ರತಿ ಬಾರಿಯೂ ನಿಮ್ಮ ಪಕ್ಷ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳ ನಿಕಟ ಒಳಗೊಳ್ಳುವಿಕೆಯೊಂದಿಗೆ ಮತ್ತು ಅಂತಿಮಗೊಳಿಸಲಾಗುತ್ತದೆ. ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯ ಪ್ರತಿಗಳನ್ನೂ ಎಲ್ಲ ರಾಜಕೀಯ ಪಕ್ಷಗಳಿಗೆ ನೀಡಲಾಗುತ್ತದೆ. ಪರಿಶೀಲನೆ ಪ್ರಕ್ರಿಯೆಯ ಪ್ರತಿಯೊಂದು ಹಂತವೂ ರಾಜಕೀಯ ಪಕ್ಷಗಳನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದೆ.

ಮತದಾನದ ಶೇಕಡಾವಾರು ಅಂತರದ ಬಗ್ಗೆಯೂ ಕಾಂಗ್ರೆಸ್‌ ಗಂಭೀರವಾಗಿ ಆರೋಪ ಮಾಡಿದ್ದು, ಇದಕ್ಕೆ ಚುನಾವಣಾ ಆಯೋಗವು ಕಾಂಗ್ರೆಸ್‌ಗೆ ತನ್ನ ಹಿಂದಿನ ಪತ್ರವನ್ನು ಉಲ್ಲೇಖಿಸಿ, ಎಲ್ಲ ಕಾರಣಗಳನ್ನು ಈಗಾಗಲೇ ಸಾರ್ವಜನಿಕಗೊಳಿಸಲಾಗಿದೆ ಎಂದು ಹೇಳಿದೆ.

ಈ ಕುರಿತ ಹೆಚ್ಚಿನ ಚರ್ಚೆಗಾಗಿ ಡಿ. 3ರಂದು ಅಪೆಕ್ಸ್ ಪೋಲ್ ಬಾಡಿ ಕಾಂಗ್ರೆಸ್‌ (The apex poll body) ನಿಯೋಗವನ್ನು ಆಹ್ವಾನಿಸಿದೆ .ಅಷ್ಟೇ ಅಲ್ಲದೆ ಚುನಾವಣಾ ಸಮಿತಿಯು ಕಾಂಗ್ರೆಸ್‌ನ ಎಲ್ಲ ಕಾನೂನುಬದ್ಧ ಕಾಳಜಿಗಳನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!