ಅಣ್ಣನ ಪತ್ನಿಗೆ ವರದಕ್ಷಿಣೆ ಕಿರುಕುಳ: ಸ್ಯಾಂಡಲ್‌ವುಡ್ ನಟಿಗೆ ಎರಡು ವರ್ಷ ಜೈಲು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತನ್ನ ಅಣ್ಣನ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಸ್ಯಾಂಡಲ್‌ವುಡ್ ನಟಿ ಅಭಿನಯ ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ಹೈಕೋರ್ಟ್ ಆದೇಶಿಸಿದೆ.

ಅಭಿನಯ ಅಣ್ಣ ಶ್ರೀನಿವಾಸ್‌ರ ಪತ್ನಿ ಲಕ್ಷ್ಮಿದೇವಿಗೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಶ್ರೀನಿವಾಸ ಮದುವೆ ಸಮಯದಲ್ಲಿ ಲಕ್ಷ್ಮಿ ಅವರ ಮನೆಯಿಂದ 80 ಸಾವಿರ ರೂ. 250 ಗ್ರಾಂ ಚಿನ್ನಾಭರಣ ನೀಡಲಾಗಿತ್ತು. ಮತ್ತೆ ಬೇಡಿಕೆ ಇಟ್ಟಿದ್ದಕ್ಕೆ 20 ಸಾವಿರ ರೂಪಾಯಿ ನೀಡಲಾಗಿತ್ತು, ಇಷ್ಟಾದ ನಂತರವೂ ಲಕ್ಷ್ಮಿಯನ್ನು ಮನೆಯಿಂದ ಹೊರಹಾಕಿದ್ದರು.

ಇದರಿಂದ ಬೇಸತ್ತ ಲಕ್ಷ್ಮಿ ಅವರು ದೂರು ನೀಡಿದ್ದರು. ವಿಚಾರಣೆ ನಂತರ ಆರೋಪಿಗಳಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಜಯಮ್ಮಗೆ ಐದು ವರ್ಷ, ಚಲುವರಾಜು ಹಾಗೂ ಅಭಿನಯಗೆ ಎರಡು ವರ್ಷ ಶಿಕ್ಷೆ ವಿಧಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!