Friday, February 3, 2023

Latest Posts

ತಮಿಳುನಾಡು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಎಂಕೆ ಸ್ಟಾಲಿನ್ ಪುತ್ರ ಉದಯನಿಧಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ನಾಲ್ಕು ವರ್ಷಗಳ ಹಿಂದೆ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ಡಿಎಂಕೆಯ ಕರುಣಾನಿಧಿ ಕುಟುಂಬದ ಕುಡಿ ಉದಯನಿಧಿ ಸ್ಟಾಲಿನ್ ಅವರು ಬುಧವಾರ ತಮ್ಮ ತಂದೆ ಎಂ ಕೆ ಸ್ಟಾಲಿನ್ ಅವರ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ.
ರಾಜ್ಯಪಾಲ ಆರ್.ಎನ್.ರವಿ ಅವರು 45 ವರ್ಷದ ಉದಯನಿಧಿ ಅವರಿಗೆ ಬೆಳಗ್ಗೆ ಪ್ರಮಾಣ ವಚನ ಬೋಧಿಸಿದರು. ಚೆನ್ನೈನ ಚೆಪಾಕ್-ತಿರುವಲ್ಲಿಕೇಣಿ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿರುವ ಉದಯಗಿರಿಗೆ ಯುವ ವ್ಯವಹಾರಗಳು ಮತ್ತು ಕ್ರೀಡಾ ಅಭಿವೃದ್ಧಿ, ವಿಶೇಷ ಕಾರ್ಯಕ್ರಮ ಅನುಷ್ಠಾನ, ಬಡತನ ನಿರ್ಮೂಲನೆ ಮತ್ತು ಗ್ರಾಮೀಣ ಇಲಾಖೆ ಖಾತೆಗಳನ್ನು ಹಂಚಲಾಗಿದೆ.
ಕೆಲವೇ ನಿಮಿಷಗಳ ಕಾಲ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ಮುಖ್ಯಮಂತ್ರಿ ಸ್ಟಾಲಿನ್ ಮತ್ತು ಅವರ ಇಡೀ ಸಂಪುಟ ಸಹೋದ್ಯೋಗಿಗಳು ಮತ್ತು ಮೈತ್ರಿಕೂಟದ ಪಾಲುದಾರ ಪಕ್ಷಗಳ ನಾಯಕರು ಭಾಗವಹಿಸಿದ್ದರು. ಪ್ರಮಾಣ ವಚನ ಸ್ವೀಕಾರದ ನಂತರ, ಉದಯ್ ಅವರು ತಮಿಳುನಾಡು ಸರ್ಕಾರದ ಅಧಿಕಾರದ ಕೇಂದ್ರವಾದ ಸೆಕ್ರೆಟರಿಯೇಟ್‌ಗೆ ಆಗಮಿಸಿ ಸಚಿವರಾಗಿ ಅಧಿಕಾರ ವಹಿಸಿಕೊಂಡರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!