ದಿಗಂತ ವರದಿ ತುಮಕೂರು:
ಕುಷ್ಠರೋಗಿಗಳ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಪಾವಗಡದ ಸ್ವಾಮಿ ವಿವೇಕಾನಂದ ಸಂಘಟಿತ ಆರೋಗ್ಯ ಕೇಂದ್ರದ ಮುಖ್ಯಸ್ಥರಾದ ಸ್ವಾಮಿ ಜಪಾನಂದರು ಇಂದು ಪಾವಗಡದ ರಾಮಕೃಷ್ಣಾಶ್ರಮದ ಆವರಣದಲ್ಲಿ ಡಿ.ಪಿ.ಎಂ.ಆರ್. ಶಿಬಿರ ಹಮ್ಮಿಕೊಂಡಿದ್ದರು.
ಈ ಶಿಬಿರದ ಅಂಗವಿಕಲತೆ ಹೊಂದಿರುವ ಕುಷ್ಠರೋಗಿಗಳಿಗೆ ಔಷಧೋಪಚಾರ ಹಾಗೂ ಸಲಹೆ, ಪಾದರಕ್ಷೆ ಇತ್ಯಾದಿಗಳನ್ನು ವಿವರಿಸಿದರು.
ಪಾವಗಡ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಅಂಗವಿಕಲತೆ ಹೊಂದಿರುವ ಕುಷ್ಠರೋಗಿಗಳು ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರಕ್ಕೆ ಆಗಮಿಸಿ
ಉಚಿತವಾಗಿ ಪಾದರಕ್ಷೆಗಳು, ಔಷಧಿಗಳು ಹಾಗೂ ಇನ್ನಿತರ ಪರಿಕರಗಳನ್ನು ಪಡೆದುಕೊಂಡರು.
ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿಗಳಾದ ಡಾ.ಎಂ.ಚೇತನ್,ವಿವೇಕಾನಂದ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿಗಳಾದ ಡಾ.ಚಂದ್ರಕಲಾ ಜಿ.ಆರ್., ಶ ಪುರುಷೋತ್ತಮ್, ಚಂದ್ರಾಚಾರ್, ಚಂದ್ರಮೌಳಿ ಮುಂತಾದವರು ಭಾಗವಹಿಸಿದ್ದರು. 30ಕ್ಕೂ ಹೆಚ್ಚು ಕುಷ್ಠರೋಗಿಗಳು ತಮ್ಮ ನ್ಯೂನತೆಗಳಿಗೆ ಹಾಗೂ ವ್ರಣಗಳಿಗೆ ಔಷಧೋಪಚಾರವನ್ನು ಪಡೆದರು.