ಕಾನೂನು ಪಾಲಿಸದವರ ಮನದಲ್ಲಿ ನಡುಕ ಹುಟ್ಟಿಸುವಂತೆ ಪೊಲೀಸರು ಕೆಲಸ ಮಾಡಬೇಕು: ಗೃಹ ಸಚಿವ ಆರಗ ಜ್ಞಾನೇಂದ್ರ

ದಿಗಂತ ವರದಿ ಮೈಸೂರು:

ಕಾನೂನು ಪಾಲಿಸದವರ ಮನದಲ್ಲಿ ನಡುಕ ಹುಟ್ಟಿಸುವಂತೆ ಕೆಲಸ ಮಾಡಬೇಕು ಎಂದು ಪೊಲೀಸರಿಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.
ಬುಧವಾರ ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ನಡೆದ 45ನೇ ಪೊಲೀಸ್ ಉಪ ನಿರೀಕ್ಷರ ಸಿವಿಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,
ರಕ್ಷಣೆ ಅಂದರೆ ಗಡಿಯ ಸೈನಿಕರು. ಆತಂರಿಕ ಭದ್ರತೆ ನಾಗರಿಕರ ಮಾನ ಪ್ರಾಣ ಕಾಪಾಡುವ ಹೊಣೆಗಾರಿಕೆ ಪೊಲೀಸರದ್ದು.

ಸೈನಿಕರಷ್ಟೇ ಪೊಲೀಸರು 24*7 ಕೆಲಸ ಮಾಡುತ್ತಿದ್ದಾರೆ. ಸೈನಿಕರಿಗಿಂತ ಪೊಲೀಸರು ವಿಭಿನ್ನ. ಸೈನಿಕರಿಗೆ ಹೊರಗಿನ ಶತ್ರುಗಳು ಕಾಣಿಸುತ್ತಾರೆ. ಅವರನ್ನು ಕೊಲ್ಲಬೇಕು ಅಥವಾ ಸೆರೆ ಹಿಡಿಯಬೇಕು. ಆದರೆ ಪೊಲೀಸರಿಗೆ ಸಮಾಜದಲ್ಲಿ ಕಾನೂನು ಪರಿಪಾಲಕರು. ಸೈನಿಕರಷ್ಟು ಕಠಿಣವಾಗಿ ವರ್ತಿಸುವಾಗಿಲ್ಲ. ಸಾರ್ವಜನಿಕರನ್ನು ಬಂಧುಗಳAತೆ ನೋಡಬೇಕು.ಕಾನೂನು ವಿರೋಧಿಸುವ ಕ್ರಿಮಿನಲ್ ಗಳಿಗೆ ಭಯ ಹುಟ್ಟಿಸಬೇಕು ನಾಗರೀಕರಿಗೆ ಸಜ್ಜನರಿಗೆ ಅಭಯವನ್ನು ನೀಡಬೇಕು ಎಂದು ಕಿವಿ ಮಾತು ಹೇಳಿದರು.

ಪೊಲೀಸರು ಕೇವಲ ಸಂಬಳಕ್ಕಾಗಿ ಕೆಲಸ ಮಾಡದೆ ಸಮಾಜ ಘಾತಕ ಶಕ್ತಿಗಳನ್ನು ಮಟ್ಟ ಹಾಕಬೇಕು. ಕಾನೂನು ಪಾಲಿಸದವರ ಮನದಲ್ಲಿ ನಡುಕ ಹುಟ್ಟಿಸುವಂತೆ ಕೆಲಸ ಮಾಡಬೇಕು. ಸೈಬರ್ ಕ್ರೆöÊಂಗಳು ಇತ್ತೀಚೆಗೆ ಹೆಚ್ಚಾಗಿವೆ. ಆ ಬಗ್ಗೆ ನಿಮ್ಮ ಜ್ಞಾನವನ್ನು ಹೆಚ್ಚು ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಕೆಲವು ಪೊಲೀಸರು ಅನಿಷ್ಟತನ ನೋಡಿದಾಗ, ಉತ್ತಮ ನಡವಳಿಕೆಯವರು ತಲೆ ತಗ್ಗಿಸುವಂತಾಗಿದೆ. ಒಮ್ಮೆಯೂ ತಲೆ ತಗ್ಗಿಸುವ ಕೆಲಸವನ್ನು ಪೊಲೀಸರು ಮಾಡಬಾರದು. ಯಾವುದೇ ಅಪಚಾರಗಳು ನಿಮ್ಮಿಂದ ಆಗಬಾರದು. ಬಹಳ ಜನ ಹೇಳುತ್ತಾರೆ ಪೊಲೀಸ್ ಠಾಣೆಗಳು ಮರ್ಯಾದಸ್ಥರು ಹೋಗವ ಸ್ಥಳವಲ್ಲ ಅಂತಾ. ಇಲ್ಲಿ ಹಲವರು ಉನ್ನತ ಶಿಕ್ಷಣ ಪಡೆದವರಿದ್ದಾರೆ. ಈ ತರಬೇತಿ ನೀಡಿರುವುದು ಯಾರಿಗೂ ಹಿಂಸೆ ಕೊಡಲು ಅಲ್ಲ. ಇದು ಜನರ ರಕ್ಷಣೆಗೆ ನೀಡಿರುವ ತರಬೇತಿ. ಹಾಗಾಗಿ ಪೊಲೀಸರು ಜನರ ರಕ್ಷಕರಾಗಬೇಕೇ ವಿನಹ ಯಾರ ಗುಲಾಮರಾಗಬಾರದು ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಎಲ್.ನಾಗೇಂದ್ರ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪಿ.ಹರಿಶೇಖರನ್, ಪೊಲೀಸ್ ಮಹಾನಿರೀಕ್ಷಕ ವಿಫುಲ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್, ಅಕಾಡೆಮಿಯ ಪ್ರಾಂಶುಪಾಲರಾದ ಡಾ.ಧರಣಿದೇವಿ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!