ಡಾ. ಲೋಕಪಾಲ ಫಾರ್ಮನೆಸ್ಟ್‌ಗೆ ಅತ್ಯುತ್ತಮ ಉದ್ಯಮ ಪ್ರಶಸ್ತಿ

ಹೊಸದಿಗಂತ ವರದಿ,ಅಂಕೋಲಾ:

ಯುವ ಉದ್ಯಮಿ ಸಂಜಯ ಲೋಕಪಾಲ ಸ್ಥಾಪಿಸಿರುವ ಡಾ. ಲೋಕಪಾಲ ಫಾರ್ಮನೆಸ್ಟ್ ಕಟ್ಟಿಗೆಗಾಣದ ಖಾದ್ಯ ಎಣ್ಣೆ ಘಟಕಕ್ಕೆ ೨೦೨೩ ರ ಸಾಲಿನ ಪ್ರತಿಷ್ಠಿತ ಎಂ.ಎಸ್.ಎಂ.ಇ( ಮೈಕ್ರೋ ಸ್ಮಾಲ್ ಮಿಡಿಯಂ ಇಂಡಸ್ಟ್ರೀಸ್) ಪ್ರಶಸ್ತಿ ಲಭಿಸಿದೆ.
ಈ ಪ್ರಶಸ್ತಿಯನ್ನು ಘಟಕದ ಅತ್ತಯಂತ ಉತ್ತಮ ಗುಣಮಟ್ಟದ ರಾಸಾಯನಿಕ ಮುಕ್ತ, ಸಾವಯವ ಮಾದರಿಯಲ್ಲಿ ತಯಾರಿಸಿದ ವಿಇವಧ ರೀತಿಯ ಖಾದ್ಯ ಎಣ್ಣೆ, ಆಕಳತುಪ್ಪ, ರಾಸಾಯನಿಕ ಮುಕ್ತ ಬೆಲ್ಲ, ಕಾಡು ಜೇನುತುಪ್ಪವನ್ನು ಗ್ರಾಹಕರಿಗೆ ಪರಿಚಯಿಸುತ್ತಿರುವುದನ್ನು ಪರಿಗಣಿಸಿ ಉತ್ತಮ ಸಾವಯವ ಆಹಾರದ ವಿಭಾಗದಡಿ ನೀಡಲಾಗಿದೆ. ಬೆಂಗಳೂರಿನ ಫರಫೀಲ್ಡ್ ಬೈ ಮೆರಿಯಟ್ ಹೊಟೇಲಿನಲ್ಲಿ ನಡೆದ ಸಮಾರಂಭದಲ್ಲಿ ಡಾ. ಲೋಕಪಾಲ ಫಾರ್ಮನೆಸ್ಟ್ ಮಾಲಕ ಸಂಜಯ ಲೋಕಪಾಲ ಮತ್ತು ಪತ್ನಿ ಶ್ರೇಯಾ ಸಂಜಯ ಅವರಿಗೆ ನೀಡಿ ಗೌರವಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!