ಡಾ. ರಾಜ್‌ ಅಪಹರಣ ಸಮಯದಲ್ಲಿ ಸಿಎಂ ಆಗಿದ್ದ ಕೃಷ್ಣ ಸಿಕ್ಕಾಪಟ್ಟೆ ಕಷ್ಟಪಟ್ಟಿದ್ರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಎಸ್​ಎಂ ಕೃಷ್ಣ ಅವರು ಇಂದು (ಡಿಸೆಂಬರ್ 10) ನಿಧನ ಹೊಂದಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಎಸ್‌.ಎಂ. ಕೃಷ್ಣ ಅವರು ಡಾ. ರಾಜ್‌ಕುಮಾರ್‌ ಅಪಹರಣದ ವೇಳೆ ಸಿಎಂ ಆಗಿದ್ದರು. ಆ ಸಮಯದಲ್ಲಿ ತುಂಬಾ ಕಷ್ಟಪಟ್ಟಿದ್ದರು. ನಿದ್ದೆಗೆಟ್ಟು ಒತ್ತಡದಲ್ಲಿ ದಿನ ಕಳೆಯುತ್ತಿದ್ದರು ಎನ್ನುವ ವಿಷಯ ಇದೀಗ ಬೆಳಕಿಗೆ ಬಂದಿದೆ.

ರಾಜ್​ಕುಮಾರ್ ಅವರನ್ನು ಅಪರಹರಣ ಮಾಡಿದ್ದು ಕಾಡುಗಳ್ಳ ವೀರಪ್ಪನ್. ಇದು ಆ ಸಂದರ್ಭದಲ್ಲಿ ದೊಡ್ಡ ಸುದ್ದಿ ಆಗಿತ್ತು. ಖ್ಯಾತ ನಾಮರೊಬ್ಬರನ್ನು ಅಷ್ಟು ಸುಲಭದಲ್ಲಿ ಅಪಹರಣ ಮಾಡಿಕೊಂಡು ಹೋದರು ಎಂಬ ವಿಚಾರ ರಾಜ್ಯ ಸರ್ಕಾರಕ್ಕೆ ತೀವ್ರವಾಗಿ ಮುಜುಗರ ತಂದಿತ್ತು. ಅವರು ಮರಳದಿದ್ದರೆ ಮುಂದೇನು ಎನ್ನುವ ಭಯ ಎಸ್​ಎಂ ಕೃಷ್ಣ ಅವರನ್ನು ಬಹುವಾಗಿ ಕಾಡಿತ್ತು. 108 ದಿನ ಅವರು ಸರಿಯಾಗಿ ನಿದ್ದೆ ಮಾಡದೆ ಒದ್ದಾಡಿದ್ದರು. ರಾಜ್​ಕುಮಾರ್ ಮರಳಿದ ಬಳಿಕ ಕೃಷ್ಣ ನಿಟ್ಟುಸಿರು ಬಿಟ್ಟರು.

ರಾಜ್​ಕುಮಾರ್ ಅವರ ಅಭಿಮಾನಿ ಬಳಗ ದೊಡ್ಡದಿದೆ. ಕೃಷ್ಣ ಅವರು ಕೂಡ ಅಣ್ಣಾವ್ರ ಅಭಿಮಾನಿ. ಅವರಿಗೆ ಏನಾದರೂ ಆದರೆ ಅಭಿಮಾನಿಗಳು ಸುಮ್ಮನೆ ಇರುವುದಿಲ್ಲ ಎಂಬುದು ಕೃಷ್ಣ ಅವರಿಗೆ ಸ್ಪಷ್ಟವಾಗಿ ತಿಳಿದಿತ್ತು. ಇನ್ನು ಬೆಂಗಳೂರಲ್ಲಿ ತಮಿಳಿಗರ ಸಂಖ್ಯೆ ಕೂಡ ದೊಡ್ಡದಿದೆ. ರಾಜ್​ಕುಮಾರ್​ಗೆ ಹಾನಿ ಆದರೆ ಬೆಂಗಳೂರಲ್ಲಿ ಕನ್ನಡಿಗರು ಹಾಗೂ ತಮಿಳಿಗರ ಮಧ್ಯೆ ಗಲಭೆ ಆದರೆ ಎನ್ನುವ ಭಯ ಕಾಡಿತ್ತು.

ರಾಜ್​ಕುಮಾರ್ ಸುಮಾರು 108 ದಿನ ಕಾಡಿನಲ್ಲಿ ಇದ್ದರು. ಬಂಧನಕ್ಕೆ ಒಳಗಾದ ವಿಚಾರವನ್ನು ಪಾರ್ವತಮ್ಮ ಅವರು ಕೃಷ್ಣಗೆ ಹೇಳಿದ್ದರು. ಆ ಸಂದರ್ಭದಲ್ಲಿ ಪಾರ್ವತಮ್ಮ ಮೈಸೂರಿನಲ್ಲಿ ಇದ್ದರು. ನಂತರ ಪಾರ್ವತಮ್ಮ ಅವರು ಬೆಂಗಳೂರಿಗೆ ಬಂದು ಮಾಹಿತಿ ನೀಡಿದರು.

ನಂತರ ನಿರಂತರ ಪ್ರಯತ್ನದಿಂದ ಅವರನ್ನು ಕರೆದುಕೊಂಡು ಬರಲಾಯಿತು. ಆ ಬಳಿಕ ರಾಜ್ಯದಲ್ಲಿ ಸಂಭ್ರಮ ಮನೆ ಮಾಡಿತ್ತು. ರಾಜ್​ಕುಮಾರ್ ಅವರನ್ನು ಕರೆತರಲು ಕೃಷ್ಣ ಅವರು ಸಾಕಷ್ಟು ಶ್ರಮ ಹಾಕಿದ್ದರು. ತಮಿಳುನಾಡಿಗೆ ತೆರಳಿ ಅಲ್ಲಿನ ನಾಯಕರಾದ ಜಯಲಲಿತಾ, ಕರುಣಾನಿಧಿ ಅವರನ್ನು ಭೇಟಿ ಮಾಡಿ ಈ ಬಗ್ಗೆ ಪದೇ ಪದೇ ಒತ್ತಾಯ ಮಾಡುತ್ತಿದ್ದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!