Thursday, March 23, 2023

Latest Posts

ಜೆಡಿಎಸ್ ಗೆ ಸೇರಿದ ಡಾ.‌ಮಹೇಶ್

ಹೊಸದಿಗಂತ ವರದಿ ಕೊಪ್ಪಳ:

ಪಕ್ಷ ತತ್ತ್ವ ಸಿದ್ಧಾಂತ ಮೆಚ್ಚಿ ಡಾ. ಮಹೇಶ್ ಗೋವಿನಕೊಪ್ಪ, ರವೀಂದ್ರ ಪಾಟೀಲ್, ಹುಸೇನ್ ಪಾಷ ಅವರು ಸೇರ್ಪಡೆಯಾಗಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ವಿರೇಶ ಮಹಾಂತಯ್ಯನಮಠ ಹೇಳಿದರು.

ನಗರದ ಮೀಡಿಯಾ ಕ್ಲಬ್ ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ತತ್ತ್ವ, ಸಿದ್ಧಾಂತ ಮೆಚ್ಚಿ ಬರುವವರಿಗೆ ಆಹ್ವಾನವಿದೆ. ಇತ್ತೀಚೆಗೆ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿದ್ದು, ಈ ಹಿಂದೆ ಪಕ್ಷದಲ್ಲಿ ಇದ್ದವರನ್ನು ಸಂಪರ್ಕಿಸಲು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡಲಾಗುತ್ತಿದೆ.

ಟಿಕೆಟ್ ಹಂಚಿಕೆ ಸೇರಿ ಯಾವ ವಿಷಯದ ಬಗ್ಗೆಯೂ ಯಾರಿಗೂ ಅಸಮಾಧಾನ ವಿಲ್ಲ. ಪಕ್ಷವು ವಿಷನ್ 123 ಗುರಿ ಹೊಂದಿದ್ದು, ಈ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ ಎಂದರು.
ಡಾ. ಮಹೇಶ್ ಗೋವಿನ್ ಕೊಪ್ಪ ಮಾತನಾಡಿ, ಸಮಾಜ ಸೇವೆ ಮಾಡಲು ವೈದ್ಯ ವೃತ್ತಿಯಿಂದ ರಾಜಕೀಯ ಕ್ಕೆ ಬಂದಿದ್ದೇನೆ. ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ಬೆಳೆಸಲಾಗುವುದು. ಪಕ್ಷದ ತತ್ತ್ವ , ಸಿದ್ಧಾಂತ ದಂತೆ ಸಂಘಟನೆ ಮಾಡುತ್ತೇನೆ ಎಂದರು.
ಜೆಡಿಎಸ್ ಮುಖಂಡ ಮಂಜುನಾಥ, ಚನ್ನಪ್ಪ, ಮಲ್ಲಿಕಾರ್ಜುನ, ರವಿ ಪಾಟೀಲ್ ಸೇರಿ ಮತ್ತಿತರರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!