ಕೋವಿಡ್ ಅಲೆಗೆ ತತ್ತರಿಸಿದ ಡ್ರ್ಯಾಗನ್: ಜನತೆಯ ಮೇಲೆ ಸರಕಾರದಿಂದ ಮತ್ತೊಂದು ಪ್ರಹಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆ ಚೀನಾದ ಹಲವೆಡೆ ಈಗಾಗಲೇ ಕಠಿಣ ಲಾಕ್​ಡೌನ್ ಹೇರಲಾಗಿದೆ. ಸೋಂಕು ಪರೀಕ್ಷೆಯನ್ನು ಕ್ಷಿಪ್ರಗೊಳಿಸಲಾಗುತ್ತಿದೆ. ಇದೀಗ ಚೀನಾದ ರಾಜಧಾನಿ ಬೀಜಿಂಗ್ ನಗರದಲ್ಲಿ 20 ಮಿಲಿಯನ್ ಜನರಿಗೆ ಸಾಮೂಹಿಕ ಸೋಂಕು ಪರೀಕ್ಷೆ ಮಾಡ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಚೀನಾದ ಅಧಿಕಾರಿಗಳು ಘೋಷಿಸಿದ್ದಾರೆ.
ಇದೀಗ ಅಲ್ಲಿ ಸುಮಾರು 21 ಮಿಲಿಯನ್ ಮಂದಿಗೆ ಸಾಮೂಹಿಕ ಪರೀಕ್ಷೆಗಳನ್ನು ಮಾಡಲಾಗುತ್ತದೆ ಎಂದು ಘೋಷಣೆ ಬೆನ್ನಲ್ಲೇ ಜನರಲ್ಲಿ ಮತ್ತೆ ಲಾಕ್​ಡೌನ್ ಘೋಷಣೆಯಾಗುವ ಅನುಮಾನ ಶುರುವಾಗಿದೆ. ಈ ಹಿನ್ನೆಲೆ ಆಹಾರ ಸಂಗ್ರಹಣೆಗೆ ಅಲ್ಲಿನ ಜನರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಬೀಜಿಂಗ್​ ನಗರದಲ್ಲಿ ಸುಮಾರು 16 ಜಿಲ್ಲೆಗಳಿದ್ದು, ಈಗಾಗಲೇ ಒಂದು ಜಿಲ್ಲೆಯಲ್ಲಿ ಸಾಮೂಹಿಕ ಸೋಂಕು ಪರೀಕ್ಷೆ ನಡೆಸಲಾಗುತ್ತಿದೆ. ನಗರದಲ್ಲಿನ ಪ್ರತ್ಯೇಕವಾಗಿರುವ ವಸತಿ ಕಟ್ಟಡಗಳಲ್ಲಿ ಲಾಕ್​ಡೌನ್​ ಜಾರಿಗೊಳಿಸಲಾಗಿದೆ. ಐದು ಜಿಲ್ಲೆಗಳನ್ನು ಹೊರತುಪಡಿಸಿ, ಎಲ್ಲಾ ಜಿಲ್ಲೆಗಳಿಗೆ ಸೋಂಕು ಪರೀಕ್ಷೆಯನ್ನು ಮಂಗಳವಾರ ವಿಸ್ತರಿಸಲಾಗುವುದು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಚೀನಾದ ಹಲವು ಪ್ರದೇಶದಲ್ಲಿ ಸೋಂಕು ಕಂಡು ಬರುತ್ತಿದ್ದು, ಸರ್ಕಾರ ಶೂನ್ಯ ಕೋವಿಡ್ ನೀತಿಯನ್ನು ಅನುಸರಿಸುತ್ತಿದೆ. ಇದರಿಂದಾಗಿ ಚೀನಾದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ವರ್ಕ್ ಫ್ರಂ ಹೋಮ್ ಕೂಡಾ ನಡೆಯುತ್ತಿದೆ. ಐಸೋಲೇಷನ್​ಗೆ ಒಳಪಡುವ ಸಾಧ್ಯತೆ ಇರುವ ಕಾರಣದಿಂದ ಇನ್ನೂ ಕೆಲವರು ಆಹಾರ ಮುಂತಾದ ಅವಶ್ಯಕ ಸಾಮಗ್ರಿಗಳನ್ನು ಖರೀದಿಸುವಲ್ಲಿ ತೊಡಗಿಕೊಂಡಿದ್ದಾರೆ. ಅಕ್ಕಿ, ನೂಡಲ್ಸ್, ತರಕಾರಿಗಳು ಮತ್ತು ಇತರ ಆಹಾರ ಪದಾರ್ಥಗಳು ಸೂಪರ್​​ ಮಾರ್ಕೆಟ್​ಗಳಲ್ಲಿ ಜನರ ಸರತಿ ಸಾಲು ದೊಡ್ಡದಾಗಿದೆ.
ಈಗಾಗಲೇ ಶಾಂಘೈ ನಗರದಲ್ಲಿ ಎರಡು ವಾರಗಳಿಗೂ ಹೆಚ್ಚು ಕಾಲ ಲಾಕ್‌ಡೌನ್ ಆಗಿದೆ. 24 ಗಂಟೆಗಳ ಅವಧಿಯಲ್ಲಿ 19,000ಕ್ಕೂ ಹೆಚ್ಚು ಹೊಸ ಸೋಂಕುಗಳು ಶಾಂಘೈ ನಗರದಲ್ಲಿ ದಾಖಲಾಗಿದ್ದು, 51 ಮಂದಿ ಸಾವನ್ನಪ್ಪಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!