Monday, August 8, 2022

Latest Posts

‘ಹೆಜ್ಜೆಯಿರಿಸಿದಳು ದ್ರೌಪದಿ, ರಾಷ್ಟ್ರಪತಿ ಭವನದಲಿ’: ಟ್ರೆಂಡ್ ಆಗುತ್ತಿದೆ ಕರಾವಳಿಯ ‘ಯಕ್ಷಗಾಯನ’!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅತ್ತ ರಾಜಧಾನಿಯಲ್ಲಿ‌ ದೇಶದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮ ದೇಶದ ರಾಷ್ಟ್ರಪತಿ ಹುದ್ದೆ ಅಲಂಕರಿಸುತ್ತಿದ್ದರೆ, ಇತ್ತ ಕರಾವಳಿಯಲ್ಲಿ ನೂತನ ರಾಷ್ಟ್ರಪತಿಯನ್ನು ಸ್ವಾಗತಿಸುವ ಯಕ್ಷಗಾನದ ಗಾಯನವೊಂದು ಟ್ರೆಂಡ್ ಆಗುತ್ತಿದೆ.

ಯಕ್ಷ ಪ್ರತಿಭೆ ಕು. ಚಿಂತನಾ ಹೆಗಡೆ ಮಾಲ್ಕೋಡ್‌ ಭಾಗವತಿಕೆ ಮಾಡಿರುವ ‘ಹೆಜ್ಜೆ ಇರಿಸಿದಳು ದ್ರೌಪದಿ ರಾಷ್ಟ್ರಪತಿ ಭವನದಲಿ’ ಯಕ್ಷಗಾನ ಪದ್ಯ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿದೆ.

ಮಹಾಭಾರತದ ಪಾತ್ರಗಳಿಗಳಿಗೆ ಅನ್ವಯವಾಗುವಂತೆ ರಚಿಸಲಾಗಿರುವ ಸಾಹಿತಿ ಅರವಿಂದ ಚಿಪೂಣ್ಯರ್ ಸಾಹಿತ್ಯ ಮನಸೆಳೆಯುತ್ತಿದೆ.

ಯಾರೀಕೆ ಚಿಂತನಾ?

ಉದಯೋನ್ಮುಖ ಯಕ್ಷಗಾನ ಕಲಾವಿದೆಯಾಗಿರುವ ಚಿಂತನಾ ಹೆಗಡೆ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಾಳ್ಕೋಡ್ ನಿವಾಸಿ. ಇವರ ಹಾಡುಗಳು ಈಗಾಗಲೇ ಯೂಟ್ಯೂಬ್ ಸಹಿತ ಅಂತರ್ಜಾಲದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಸೆಳೆದಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss