Saturday, March 25, 2023

Latest Posts

ಡ್ರೀಮ್ ಗರ್ಲ್ 2‌ ಟೀಸರ್‌ ಔಟ್‌ : ಲೆಹಂಗಾ ತೊಟ್ಟು ಪಠಾಣ್ ಜತೆ ಚೆಲ್ಲಾಟವಾಡಿದ ಆಯುಷ್ಮಾನ್ ಖುರಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಬಹುಬೇಡಿಕೆಯ ನಟ ಆಯುಷ್ಮಾನ್‌ ಖುರಾನ ಡ್ರೀಮ್‌ ಗರ್ಲ್‌ ೨ ಮೂಲಕ ತೆರೆಯ ಮೇಲೆ ಬರಲು ಸಜ್ಜಾಗಿದ್ದಾರೆ. ಖುರಾನ ಅವರ ಸಿನೆಮಾ ಡ್ರೀಮ್‌ ಗರ್ಲ್‌ ಹಿಟ್ ಆಗಿತ್ತು, ಅದರ ಸೀಕ್ವೆಲ್‌ ಈಗ ಬರುತ್ತಿದೆ. ಡ್ರೀಮ್‌ ಗರ್ಲ್‌ 2 ಸಿನೆಮಾದ ಟೀಸರ್‌ ಬಿಡುಗಡೆಯಾಗಿದ್ದು, ಟೀಸರ್​ನಲ್ಲಿ ಆಯುಷ್ಮಾನ್ ಅವರು ಲೆಹಂಗಾ ತೊಟ್ಟು ಪಠಾಣ್​ ಜತೆ ಫ್ಲರ್ಟ್‌ ಮಾಡಿದ್ದಾರೆ.

ಈ ಕುರಿತು ಆಯುಷ್ಮಾನ್ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿದ್ದು, ಪೋಸ್ಟ್‌ ನಲ್ಲಿ ವೀಡಿಯೋ ತುಣುಕನ್ನು ಕೂಡ ಹಂಚಿಕೊಂಡಿದ್ದಾರೆ.

ಟೀಸರ್‌ ನಲ್ಲಿ ಲೆಹಂಗಾ ತೊಟ್ಟು, ಗುಲಾಬಿ ಹೂ ಹಿಡಿದು ಆಯುಷ್ಮಾನ್ ನಿಂತಿರುತ್ತಾರೆ. ಅವರಿಗೆ ಒಂದು ಫೋನ್ ಕಾಲ್ ಬರುತ್ತದೆ. ಈ ಕರೆ ಸ್ವೀಕರಿಸಿ, ‘ಪೂಜಾ ಮಾತನಾಡುತ್ತಾ ಇದೀನಿ’ ಎಂದು ಹೇಳುತ್ತಿದ್ದಂತೆ ಎದುರಿದ್ದವರು, ‘ನಾನು ಪಠಾಣ್ ಮಾತನಾಡುತ್ತಾ ಇದೀನಿ’ ಎಂದು ಶಾರುಖ್ ಖಾನ್ ಧ್ವನಿ ಹೋಲುವ ವಾಯ್ಸ್​ ಬರುತ್ತದೆ. ‘ಯಾವಾಗ ಬರ್ತೀಯಾ ಪೂಜಾ’ ಎಂದು ಕೇಳಲಾಗುತ್ತದೆ. ಇದಕ್ಕೆ ಉತ್ತರಿಸುವ ಆಯುಷ್ಮಾನ್​, ‘ಜುಲೈ 7’ ಎನ್ನುತ್ತಾರೆ. ಈ ಮೂಲಕ ಚಿತ್ರದ ರಿಲೀಸ್ ದಿನಾಂಕ ರಿವೀಲ್ ಮಾಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!