ಫಿಪಾ ವಿಶ್ವಕಪ್ ನೋಡಲು ಬರುವ ಮಹಿಳಾ ಅಭಿಮಾನಿಗಳಿಗೆ ಡ್ರೆಸ್​ಕೋಡ್: ನಿಯಮ ಉಲ್ಲಂಘಿಸಿದ್ರೆ ಜೈಲೇ ಗತಿ!​

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಾಳೆಯಿಂದ ಫಿಪಾ ವಿಶ್ವಕಪ್ 2022 ಆವೃತ್ತಿಯು ಕತಾರ್‌ನಲ್ಲಿ ಪ್ರಾರಂಭವಾಗಲಿದ್ದು, ಸಕಲ ಸಿದ್ದತೆಗಳು ನಡೆಯುತ್ತಿದೆ. ಇದರ ನಡುವೆ ಇತ್ತ ಶೋಪೀಸ್ ಈವೆಂಟ್‌ಗೆ ಚಾಲನೆಯಲ್ಲಿ ಸಾಕಷ್ಟು ವಿವಾದಗಳು ಉಂಟಾಗಿವೆ. ಕತಾರ್‌ನಲ್ಲಿ ಮೆಗಾ ಪಂದ್ಯಾವಳಿಗೆ ಸಂಬಂಧಿಸಿದಂತೆ ಸಾಕಷ್ಟು ನಾಟಕೀಯ ಬೆಳವಣಿಗೆಗಳು ನಡೆದಿವೆ.

ಈ ಬಾರಿ ವಿಶ್ವಕಪ್‌ ಗೆ ಆಗಮಿಸುವ ಇತರ ದೇಶಗಳ ಮಹಿಳಾ ಅಭಿಮಾನಿಗಳು ಸರಿಯಾಗಿ ಬಟ್ಟೆ ಧರಿಸುವಂತೆ ಮತ್ತು ಹೆಚ್ಚು ದೇಹ ಪ್ರದರ್ಶನ ಮಾಡದಂತೆ ಸಲಹೆ ನೀಡಲಾಗಿದೆ. ಯಾವುದೇ ಮಹಿಳಾ ಅಭಿಮಾನಿಗಳು ಇದನ್ನು ಅನುಸರಿಸಲು ವಿಫಲವಾದರೆ, ಅವರು ತೊಂದರೆಗೆ ಒಳಗಾಗಬಹುದು ಮತ್ತು ಸ್ವತಃ ಜೈಲು ಪಾಲಾಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ.

ಕತಾರ್‌ನಲ್ಲಿಮಹಿಳೆಯರು ಬಿಗಿಯಾದ ಬಟ್ಟೆಗಳನ್ನು ಧರಿಸುವುದು ಮತ್ತು ತಮ್ಮ ದೇಹದ ಅಂಗಗಳನ್ನು ಸಾರ್ವಜನಿಕವಾಗಿ ತೋರಿಸುವುದನ್ನು ನಿಷೇಧಿಸಿ ಕಾನೂನುಗಳು ಇದ್ದು, ಹಾಗಾಗಿ ಎಚ್ಚರಿಕೆ ನೀಡಲಾಗಿದೆ.

ಮತ್ತೊಂದೆಡೆ ಫಿಫಾ ವೆಬ್‌ಸೈಟ್, ಮಹಿಳೆಯರು ತಮಗೆ ಇಷ್ಟವಾದದ್ದನ್ನು ಧರಿಸಬಹುದು ಆದರೆ ಕತಾರ್‌ನ ಕಟ್ಟುನಿಟ್ಟಾದ ಕಾನೂನುಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದೆ.

ಜನರು ಸಾಮಾನ್ಯವಾಗಿ ತಮ್ಮ ಆಯ್ಕೆಯ ಉಡುಪುಗಳನ್ನು ಧರಿಸಬಹುದು. ವಸ್ತುಸಂಗ್ರಹಾಲಯಗಳು ಮತ್ತು ಇತರ ಸರ್ಕಾರಿ ಕಟ್ಟಡಗಳಂತಹ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡುವಾಗ ಸಂದರ್ಶಕರು ತಮ್ಮ ಭುಜಗಳು ಮತ್ತು ಮೊಣಕಾಲುಗಳನ್ನು ಮುಚ್ಚಿಕೊಳ್ಳಬೇಕೆಂದು ನಿರೀಕ್ಷಿಸಲಾಗಿದೆಎಂದು ವಿಶ್ವಕಪ್ ವೆಬ್‌ಸೈಟ್ ಹೇಳುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!