ಉಕ್ಕಿನ ಮೇಲಿನ ರಫ್ತು ಸುಂಕ ಹಿಂಪಡೆದ ಕೇಂದ್ರ ಸರ್ಕಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೇಂದ್ರ ಸರ್ಕಾರವು ಉಕ್ಕಿನ ಮೇಲಿನ ರಫ್ತು ಸುಂಕವನ್ನು ಹಿಂಪಡೆದಿದ್ದು, ಈ ಮೂಲಕ 22ನೇ ಮೇ 2022 ರ ಮೊದಲು ಚಾಲ್ತಿಯಲ್ಲಿದ್ದ ಯಥಾಸ್ಥಿತಿಯನ್ನು ಮರುಸ್ಥಾಪಿಸಿದೆ.

ಇದರಲ್ಲಿ ಕಬ್ಬಿಣದ ಅದಿರು, ಉಕ್ಕಿನ ಉತ್ಪನ್ನಗಳ ಮೇಲಿನ ರಫ್ತು ಸುಂಕ, ಆಂಥ್ರಾಸೈಟ್ , ಪಿಸಿಐ ಕಲ್ಲಿದ್ದಲು, ಕೋಕಿಂಗ್ ಕಲ್ಲಿದ್ದಲು, ಕೋಕ್ ಮತ್ತು ಸೆಮಿ ಕೋಕ್ ಮತ್ತು ಫೆರೋನಿಕಲ್ ಮೇಲಿನ ಆಮದು ಸುಂಕದ ಇದ್ದ ರಿಯಾಯಿತಿಗಳನ್ನು ಸಹ ಹಿಂಪಡೆಯಲಾಗಿದೆ.

ಮೇ, 2022 ರಲ್ಲಿ ಉಕ್ಕಿನ ಬೆಲೆಗಳಲ್ಲಿ ಏರಿಕೆಯ ಹಿನ್ನೆಲೆಯಲ್ಲಿ ಸರ್ಕಾರವು ಈ ವರ್ಷದ ಆರಂಭದಲ್ಲಿ ಹಲವಾರು ಕ್ರಮಗಳನ್ನು ತೆಗೆದುಕೊಂಡಿತು. 22ನೇ ಮೇ, 2022 ರಿಂದ ಜಾರಿಗೆ ಬರುವಂತೆ 58% ಕ್ಕಿಂತ ಹೆಚ್ಚು ಕಬ್ಬಿಣದ ಅಂಶವನ್ನು ಹೊಂದಿರುವ ಕಬ್ಬಿಣದ ಅದಿರಿನ ಮೇಲಿನ ರಫ್ತು ಸುಂಕವನ್ನು 30% ರಿಂದ 50% ಮೌಲ್ಯಕ್ಕೆ ಹೆಚ್ಚಿಸಲಾಗಿತ್ತು.ಇದೀಗ ಸುಂಕವನ್ನು ಹಿಂಪಡೆದಿದ್ದು ಯಥಾಸ್ಥಿತಿಯನ್ನು ಮರುಸ್ಥಾಪಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!