ಮದ್ಯ ಸೇವಿಸಿ ಬೊಕ್ಕಸಕ್ಕೆ ತುಂಬಿಸಿ: ಯುವಜನತೆಗೆ ಸರಕಾರದ ಕರೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಪಾನ್ ಸರ್ಕಾರ ಯುವಕರಲ್ಲಿ ಹೆಚ್ಚೆಚ್ಚು ಸಾರಾಯಿ ಸೇವಿಸುವಂತೆ ಪ್ರಚೋದಿಸುತ್ತಿದೆ. ಇದಕ್ಕೆ ಕಾರಣ ಅಲ್ಕೊಹಾಲ್​ನಿಂದ ಸರ್ಕಾರದ ಬೊಕ್ಕಸಕ್ಕೆ ಬರುತ್ತಿದ್ದ ಆದಾಯ ಕಡಿಮೆಯಾಗುತ್ತಿದೆ. ಹೀಗಾಗಿ ಪ್ರೋತ್ಸಾಹಿಸುತ್ತಿದೆ.

ಜನಸಂಖ್ಯಾ ನಿಬಿಡತೆಯಲ್ಲಿನ ಬದಲಾವಣೆ, , ಕೊರೋನಾ ಉಂಟಾದ ಜೀವನ ಶೈಲಿಯ ಬದಲಾವಣೆಗಳಿಂದ ಅಲ್ಕೊಹಾಲ್​ನಿಂದ ಬರುತ್ತಿದ್ದ ಆದಾಯ ಕಡಿಮೆಯಾಗಿದೆ. ಈ ಆದಾಯದ ಹೆಚ್ಚಳಕ್ಕಾಗಿ ಸರ್ಕಾರವೇ ಖುದ್ದಾಗಿ ಹೆಚ್ಚೆಚ್ಚು ಮದ್ಯ ಸೇವಿಸುವುದನ್ನು ಪ್ರಚೋದಿಸುವ ಸ್ಪರ್ಧೆಗಳನ್ನು ಏರ್ಪಡಿಸುತ್ತಿದೆ.

ರಾಷ್ಟ್ರದ ತೆರಿಗೆ ಇಲಾಖೆಯು ಸೇಕ್ ವಿವಾ! (Sake Viva!) ಹೆಸರಿನಲ್ಲಿ ಅಭಿಯಾನವೊಂದನ್ನು ಆರಂಭಿಸಿದ್ದು, ಇದು ಸೆಪ್ಟೆಂಬರ್ 9ರವರೆಗೆ ನಡೆಯಲಿದೆ. ಯುವಜನರು ಹೆಚ್ಚು ಮದ್ಯ ಸೇವಿಸಲು ಏನು ಮಾಡಬೇಕೆಂಬ ಬಗ್ಗೆ ಹೊಸ ಉತ್ಪನ್ನ ಮತ್ತು ವಿನ್ಯಾಸಗಳ ಬಗ್ಗೆ ಐಡಿಯಾಗಳನ್ನು ನೀಡುವಂತೆ 20 ರಿಂದ 39ರ ವಯೋಮಾನದ ಜನರಿಗೆ ಈ ಅಭಿಯಾನದ ಮೂಲಕ ಸ್ಪರ್ಧೆ ಏರ್ಪಡಿಸಲಾಗಿದೆ.

ಜಪಾನ್​ನ ಅಲ್ಕೊಹಾಲಿಕ್ ಪಾನೀಯಗಳಾದ ಸೇಕ್ (ಅಕ್ಕಿ ವೈನ್), ಬಿಯರ್, ವಿಸ್ಕಿ ಮತ್ತು ವೈನ್​ಗಳ ಸೇವನೆಯನ್ನು ಹೆಚ್ಚಿಸುವುದು ಅಭಿಯಾನದ ಉದ್ದೇಶವಾಗಿದೆ.

ಈ ಯೋಜನೆಯಲ್ಲಿ ಯುವಜನರು ತಮ್ಮದೇ ಆದ ವ್ಯಾಪಾರ ವ್ಯವಹಾರ ಯೋಜನೆಗಳನ್ನು ಪ್ರಸ್ತಾಪಿಸಲು ಕೇಳುವ ಮೂಲಕ, ನಾವು ಜಪಾನಿನ ಆಲ್ಕೊಹಾಲಿಕ್ ಪಾನೀಯಗಳ ಅಭಿವೃದ್ಧಿ ಮತ್ತು ಪ್ರಚಾರಕ್ಕಾಗಿ ಯುವಜನರಿಗೆ ಮನವಿ ಮಾಡುತ್ತಿದ್ದೇವೆ. ಅದೇ ಸಮಯದಲ್ಲಿ ನಾವು ಅಲ್ಕೊಹಾಲ್ ಉದ್ಯಮವನ್ನು ಪುನಶ್ಚೇತನಗೊಳಿಸುತ್ತಿದ್ದೇವೆ ಎಂದು ವೆಬ್​ಸೈಟ್​ನಲ್ಲಿ ತಿಳಿಸಲಾಗಿದೆ.

ಆಲ್ಕೋಹಾಲ್ ಉತ್ಪನ್ನಗಳ ಮೇಲಿನ ತೆರಿಗೆ ಸಂಗ್ರಹಗಳು 1980 ರಲ್ಲಿ ದೇಶದ ಒಟ್ಟು ಆದಾಯದ ಶೇ 5ರಷ್ಟಿತ್ತು. ಆದರೆ 2020 ರಲ್ಲಿ ಇದು ಕೇವಲ ಶೇ 1.7ಕ್ಕೆ ಕುಗ್ಗಿದೆ. ಕೊರೊನಾ ನಂತರ ವರ್ಕ್ ಫ್ರಮ್ ಹೋಮ್ ಮಾದರಿ ಹೆಚ್ಚಾಗಿದೆ. ಈ ಸಮಯದಲ್ಲಿ ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಲು ಕುಡಿಯುವುದು ಅಗತ್ಯವಾಗಿದೆಯಾ ಎಂದು ಜನ ವಿಚಾರ ಮಾಡುತ್ತಿದ್ದಾರೆ ಎನ್ನಲಾಗಿದೆ.

 

 

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!