ಧವನ್ – ಗಿಲ್ ಅಬ್ಬರದ ಬ್ಯಾಟಿಂಗ್‌: ಜಿಂಬಾಬ್ವೆ ವಿರುದ್ದ ಭಾರತಕ್ಕೆ 10 ವಿಕೆಟ್ ಭರ್ಜರಿ ಗೆಲುವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೌಲರ್‌ಗಳ ಮಿಂಚಿನ ದಾಳಿ ಬಳಿಕ ಶಿಖರ್ ಧವನ್ ಹಾಗೂ ಶುಭಮನ್ ಗಿಲ್ ಅಬ್ಬರದ ಬ್ಯಾಟಿಂಗ್‌ನಿಂದ ಟೀಂ ಇಂಡಿಯಾ ಜಿಂಬಾಬ್ವೆ ವಿರುದ್ದ ಗೆಲುವು ಸಾಧಿಸಿದೆ.
ಮೊದಲ ಏಕದಿನ ಪಂದ್ಯದಲ್ಲಿ ಭಾರತ 10 ವಿಕೆಟ್ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಜಿಂಬಾಬ್ವೆ ತಂಡವನ್ನು ಕೇವಲ 189 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಭಾರತ ಯಶಸ್ವಿಯಾಗಿತ್ತು. ಶಿಖರ್ ಧವನ್ ಹಾಗೂ ಶುಭಮನ್ ಗಿಲ್ ಹಾಫ್ ಸೆಂಚುರಿ ಮೂಲಕ ಟೀಂ ಇಂಡಿಯಾಗ ಗೆಲುವು ತಂದುಕೊಟ್ಟರು. ಭಾರತ 30.5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಗೆಲುವು ಸಾಧಿಸಿತು.
ಶಿಖರ್ ಧವನ್ ಅಜೇಯ 81 ರನ್ ಸಿಡಿಸಿದರೆ, ಗಿಲ್ ಅಜೇಯ 82 ರನ್ ಸಿಡಿಸಿದರು. ಈ ಆರಂಭಿಕ ಜೋಡಿ 192 ರನ್ ಜೊತೆಯಾಟ ನೀಡಿತು. 10 ವಿಕೆಟ್ ಗೆಲುವಿನ ಪಂದ್ಯಗಳಲ್ಲಿ ನೀಡಿದ 2ನೇ ಗರಿಷ್ಠ ಜೊತೆಯಾಟ ಅನ್ನೋ ಹೆಗ್ಗಳಿಕೆಗೂ ಈ ಪಂದ್ಯ ಪಾತ್ರವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!