HEALTH| ಮಿಲ್ಕ್ ಶೇಕ್ ಕುಡಿಯುತ್ತೀರಾ? ಆರೋಗ್ಯದ ಬಗ್ಗೆ ಇರಲಿ ಗಮನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿಪರೀತ ಬಿಸಿಲಿನ ವಾತಾವರಣವಿದ್ದಾಗ ಸಾಮಾನ್ಯವಾಗಿ ತಂಪು ಪಾನೀಯಗಳಿಗೆ ಬೇಡಿಕೆ ಹೆಚ್ಚಿದೆ. ಹಣ್ಣಿನ ರಸ, ಮಿಲ್ಕ್ ಶೇಕ್ಸ್ ಮೊರೆ ಹೋಗುತ್ತಾರೆ. ಸಾಮಾನ್ಯವಾಗಿ ಬೇಸಿಗೆ ಎಂದಾಕ್ಷಣ ನಮಗೆ ನೆನಪಾಗುವುದು ಮಾವಿನ ಹಣ್ಣು. ಇವುಗಳಿಂದಲೇ ಮಿಲ್ಕ್ ಶೇಕ್ ಕೂಡ ಮಾಡುತ್ತಾರೆ. ಹಣ್ಣುಗಳೊಂದಿಗೆ ಬೆರೆಸಿದ ಹಾಲಿನೊಂದಿಗೆ ಶೇಕ್ಸ್ ಮಾಡಬಹುದೇ? ಆಯುರ್ವೇದ ತಜ್ಞರು ಈ ವಿಷಯದಲ್ಲಿ ಕೆಲವು ಎಚ್ಚರಿಕೆಗಳನ್ನು ನೀಡುತ್ತಿದ್ದಾರೆ. ಎಲ್ಲಾ ಹಣ್ಣುಗಳೊಂದಿಗೆ ಹಾಲು ಬೆರೆಸಿ ಸೇವಿಸಿದರೆ ಅನೇಕ ಆರೋಗ್ಯ ಸಮಸ್ಯೆಗಳು ಬರುತ್ತವೆ ಎಂದು ಹೇಳಲಾಗುತ್ತದೆ. ಇದು ಸ್ಲೋ ಪಾಯ್ಸನ್ ಆಗುವ ಅಪಾಯವಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಆಯುರ್ವೇದದ ಪ್ರಕಾರ ಎಲ್ಲಾ ಹಣ್ಣುಗಳನ್ನು ಹಾಲಿನೊಂದಿಗೆ ಬೆರೆಸುವುದು ಒಳ್ಳೆಯದಲ್ಲ.. ಸಿಹಿಯಾದ, ಸಂಪೂರ್ಣವಾಗಿ ಮಾಗಿದ ಹಣ್ಣುಗಳನ್ನು ಮಾತ್ರ ಹಾಲಿನೊಂದಿಗೆ ಬೆರೆಸಲು ಸೂಕ್ತವಾಗಿದೆ. ಮಾವು ಮತ್ತು ಬಾಳೆಹಣ್ಣು ಎರಡೂ ಸಿಹಿಯಾಗಿರುತ್ತದೆ.. ಆದ್ದರಿಂದ ಹೆಚ್ಚಿನವರು ಬೆಳಗಿನ ಉಪಾಹಾರಕ್ಕೆ ಮಾವು ಮತ್ತು ಬಾಳೆಹಣ್ಣಿನ ಮಿಲ್ಕ್ ಶೇಕ್ ತೆಗೆದುಕೊಳ್ಳಲು ಆಸಕ್ತಿ ತೋರಿಸುತ್ತಾರೆ. ಆದರೆ ವಾಸ್ತವವಾಗಿ ಇವೆರಡೂ ಆರೋಗ್ಯಕರವೇ..?

ಆದರೆ, ಹಣ್ಣುಗಳನ್ನು ನೋಡಿದರೆ ಮಾವು ಮತ್ತು ಬಾಳೆಹಣ್ಣುಗಳೆರಡೂ ಹಲವು ರೀತಿಯಲ್ಲಿ ಆರೋಗ್ಯಕ್ಕೆ ಒಳ್ಳೆಯದು. ಆದರೆ ಮಾವು ಮಾತ್ರ ಹಾಲಿನೊಂದಿಗೆ ಸೇವಿಸಿದರೆ ಒಳ್ಳೆಯದು ಎನ್ನುತ್ತಾರೆ ಆಯುರ್ವೇದ ವೈದ್ಯರು. ಬಾಳೆಹಣ್ಣು ಸಿಹಿಯಾಗಿರಬಹುದು ಆದರೆ ಜೀರ್ಣವಾದ ನಂತರ ಅದು ಹುಳಿಯಾಗುತ್ತದೆ. ಹಾಲಿನೊಂದಿಗೆ ಬೆರೆಸಿ ಪ್ರಯೋಜನವಿಲ್ಲ.. ಹಾಗಾಗಿ ಎರಡನ್ನೂ ಬೆರೆಸಬಾರದು ಅಂತಾರೆ ಆಯುರ್ವೇದ ತಜ್ಞರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!