Friday, December 8, 2023

Latest Posts

ಅಂಕೋಲದಲ್ಲಿ ಮಾವು ಮೇಳಕ್ಕೆ ಚಾಲನೆ, ಇಲ್ಲಿವೆ ವಿಧವಿಧದ ಮಾವುಗಳು!

ಹೊಸದಿಗಂತ ವರದಿ ಅಂಕೋಲಾ:

ಬೆಳೆಗಾರರ ಸಮಿತಿ ಅಂಕೋಲಾ ಇವರ ಆಶ್ರಯದಲ್ಲಿ ಎರಡನೇ ವರ್ಷದ ಮಾವು ಮೇಳಕ್ಕೆ ತಾಲೂಕಿನ ಗೋಖಲೆ ಸೆಂಟಿನರಿ ಕಾಲೇಜಿನ ಆವರಣದಲ್ಲಿ ಕಾಲೇಜಿನ ಪ್ರಾಚಾರ್ಯ ಸಿದ್ಧಲಿಂಗಸ್ವಾಮಿ ವಸ್ತ್ರದ ಅವರು ಚಾಲನೆ ನೀಡಿದರು.

ಮಾವು ಮೇಳದಲ್ಲಿ ಅಂಕೋಲೆಯ ಸುಪ್ರಸಿದ್ಧ ಕರಿ ಇಶಾಡ ಮಾವಿನ ಹಣ್ಣು ಸೇರಿದಂತೆ ವಿವಿಧ ಬಗೆಯ ಮಾವಿನ ಹಣ್ಣುಗಳು, ಮಾವಿನ ಸಸಿ, ಮಾವಿನ ಕಾಯಿ ಮತ್ತು ಮಾವಿನ ಹಣ್ಣಿನ ಉತ್ಪನ್ನಗಳು ಲಭ್ಯವಿದ್ದು ಮಾವಿನ ಹಣ್ಣಿನ ಪಲ್ಪ್ ತಯಾರಿಸಿ ಸಂಸ್ಕರಿಸುವ ಪ್ರಾತ್ಯಕ್ಷಿಕೆ ನಡೆಯಿತು.

ಬೆಳೆಗಾರರ ಸಮಿತಿ ಗೌರವಾಧ್ಯಕ್ಷ ದೇವರಾಯ ನಾಯಕ, ಹನುಮಂತ ಗೌಡ, ಭಾಸ್ಕರ ನಾರ್ವೇಕರ್, ಅಧ್ಯಕ್ಷ ನಾಗರಾಜ ನಾಯಕ, ಕಾರ್ಯದರ್ಶಿ ರಾಮಚಂದ್ರ ಹೆಗಡೆ, ವಕೀಲ ಸುಭಾಷ ನಾರ್ವೇಕರ್, ಉಮೇಶ ನಾಯ್ಕ, ಸಾಹಿತಿ ವಿಠ್ಠಲ ಗಾಂವಕರ್, ಮಹಾಂತೇಶ ರೇವಡಿ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!