ಸಿಂಗಾಪುರ್‌ನಲ್ಲಿ ಮತ್ತೊಂದು ಕೊರೊನಾ ರೂಪಾಂತರ: ಪ್ರತಿದಿನ 15 ಸಾವಿರ ಪ್ರಕರಣ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಿಂಗಾಪುರದಲ್ಲಿ ಮತ್ತೊಂದು ಕೊರೊನಾ ಅಲೆ ಸಂಚಲನ ಮೂಡಿಸುತ್ತಿದೆ. XBB ಉಪ ರೂಪಾಂತರದಿಂದ ಆ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅಕ್ಟೋಬರ್ 3 ರಿಂದ 9 ರವರೆಗೆ, 54 ಪ್ರತಿಶತದಷ್ಟು ಕರೋನಾ ಪ್ರಕರಣಗಳು ಹೆಚ್ಚಾಗಿವೆ ಎಂದು ದೇಶದ ಆರೋಗ್ಯ ಸಚಿವ ಓಂಗ್ ಯೆ ಕುಂಗ್ ಹೇಳಿದ್ದಾರೆ. ಆಸ್ಟ್ರೇಲಿಯಾ, ಡೆನ್ಮಾರ್ಕ್, ಭಾರತ ಮತ್ತು ಜಪಾನ್ ಸೇರಿದಂತೆ 17 ದೇಶಗಳಲ್ಲಿ ಈ ಕರೋನಾ ರೂಪಾಂತರವನ್ನು ಪತ್ತೆಹಚ್ಚಲಾಗಿದೆ ಎಂದಿದ್ದಾರೆ.

ಕೊರೊನಾದಿಂದ ಚೇತರಿಸಿಕೊಂಡವರಿಗೆ ಈ ರೂಪಾಂತರ ಮತ್ತೆ ಹರಡುತ್ತದೆ ಎಂಬ ಮಾಹಿತಿ ನೀಡಿದ್ದು, ಜನರನ್ನು ಮತ್ತಷ್ಟು ಆತಂಕಕ್ಕೆ ಗುರಿಮಾಡಿದೆ. ಈ XBB ಉಪ ರೂಪಾಂತರ ನವೆಂಬರ್ ಮಧ್ಯ ಹಾಗೂ ಕೊನೆಯಲ್ಲಿ ಕರೋನಾ ಪ್ರಕರಣಗಳ ಸಂಖ್ಯೆಯು ಗರಿಷ್ಠ ಮಟ್ಟವನ್ನು ತಲುಪಬಹುದು ಎಂದು ಸಿಂಗಾಪುರ್ ಸರ್ಕಾರ ಹೇಳಿದೆ. ಈ ಅಲೆಯ ಗರಿಷ್ಠ ಹಂತದಲ್ಲಿ, ಪ್ರತಿದಿನ ಸರಾಸರಿ 15,000 ಪ್ರಕರಣಗಳು ದಾಖಲಾಗುವ ನಿರೀಕ್ಷೆಯಿದೆ.

ಈಗಿನ ಕರೋನಾ ಪರಿಸ್ಥಿತಿ ಮತ್ತು ಆರೋಗ್ಯ ವ್ಯವಸ್ಥೆಯ ಮೇಲಿನ ಪರಿಣಾಮವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದರು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗುವುದು ಮತ್ತು ಅಗತ್ಯವಿದ್ದರೆ ಸುರಕ್ಷಿತ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗುವುದು ಎಂದು ಓಂಗ್ ಯೆ ಕುಂಗ್ ಹೇಳಿದರು. ಮನೆಯಿಂದ ಕೆಲಸ (‌ವರ್ಕ್ ಫ್ರಮ್‌ ಹೋಂ) ಗೆ ಅವಕಾಶ ನೀಡಲು ಚಿಂತನೆ ನಡೆಸಲಾಗುತ್ತಿದೆ. ಅಕ್ಟೋಬರ್ 14 ರ ಹೊತ್ತಿಗೆ, ಸಿಂಗಾಪುರದಲ್ಲಿ ಒಟ್ಟು ಕರೋನಾ ಪ್ರಕರಣಗಳ ಸಂಖ್ಯೆ 1,997,847 ಕ್ಕೆ ತಲುಪಿದ್ದು, ಒಟ್ಟು ಸಾವಿನ ಸಂಖ್ಯೆ 1,641 ಕ್ಕೆ ತಲುಪಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!