ಚೀನಾದಿಂದ ಬಂತು ಡ್ರೈವರ್ ಲೆಸ್ ಮೆಟ್ರೋ ಬೋಗಿ: ಏನಿದರ ವಿಶೇಷತೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈಗಿನ ನವಯುಗ ತಂತ್ರಜ್ಞಾನದಲ್ಲಿ ಅಸಾಧ್ಯ ಎಂಬುದು ಯಾವುದು ಇಲ್ಲ. ಮಾನವನ ಬುದ್ಧಿವಂತಿಕೆಯಿಂದ ಸಾಕಷ್ಟು ಉಪಕರಣಗಳು ನವೀಕರಣ ರೂಪ ಪಡೆದುಕೊಳ್ಳುತ್ತಿದೆ. ಪೆಟ್ರೋಲ್ ರಹಿತ ವಾಹನಗಳು ಈಗಾಗಲೇ ಮಾರ್ಕೆಟ್ ಗೆ ಲಗ್ಗೆ ಇಟ್ಟಿವೆ. ಈಗ ಈ ಸಾಲಿಗೆ ಹೊಸ ಸೇರ್ಪಡೆಯಾಗುತ್ತಿದೆ, ಅದುವೇ ನಮ್ಮ ಮೆಟ್ರೋ.

ಹೌದು, ನಮ್ಮ ಮೆಟ್ರೋ ಈಗ ಡ್ರೈವರ್ ಲೆಸ್ ಬೋಗಿಗಳನ್ನು ಲಾಂಚ್ ಮಾಡಲು ಮುಂದಾಗಿದೆ. ಏನಪ್ಪಾ ಇದು ಡ್ರೈವರ್ ಲೆಸ್ ಮೆಟ್ರೋ, ಇದರ ವಿಶೇಷತೆ ಏನು ಅಂದ್ರೆ ಈ ಬೋಗಿಗಳನ್ನು ಡ್ರೈವರ್ ಇಲ್ಲದೆ ಚಲಾಯಿಸಬಹುದಾಗಿದೆ. ಆಧುನಿಕ ತಂತ್ರಜ್ಞಾನದಿಂದ ನಿರ್ಮಿಸಲಾದ ಉಪಕರಣಗಳನ್ನು ಬಳಸಿ ಈ ಡ್ರೈವರ್ ರಹಿತ ಮೆಟ್ರೋ ಬೋಗಿಗಳನ್ನು ಮಾಡಲಾಗಿದೆ.

ಇಷ್ಟಕ್ಕೂ ಈ ಮೆಟ್ರೋ ತಯಾರಿ ಎಲ್ಲಿಂದ ಅಂತ ನೋಡೋದಾದರೆ, ಇದನ್ನು ಚೀನಾದಲ್ಲಿ ನವೀಕರಿಸಲಾಗಿದೆ. ಚೀನಾ ತಯಾರಿಸಿರುವ ಈ ಬೋಗಿ ಇದೀಗ ನಮ್ಮ ಬೆಂಗಳೂರಿಗೆ ಲಗ್ಗೆ ಇಟ್ಟಿವೆ. ಸಮುದ್ರ ಮಾರ್ಗವಾಗಿ ಫೆಬ್ರವರಿ 6 ರಂದು ಚೆನ್ನೈ ಬಂದರು ಮೂಲಕ ಲಾರಿಗಳಲ್ಲಿ ಈ ಬೋಗಿಯನ್ನು ಬೆಂಗಳೂರಿಗೆ ತರಲಾಗಿದೆ. ಇದೀಗ ಈ ಪೈಕಿ 6 ಕಾರುಗಳ ಮೊದಲ ಬೋಗಿಗಳು ಬೆಂಗಳೂರಿಗೆ ಬಂದಿವೆ.

ಇದರ ಟೆಸ್ಟಿಂಗ್ ಆದಷ್ಟು ಬೇಗ ಶುರುವಾಗಲಿದ್ದು, ಇದು ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!