ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗಷ್ಟೇ ಗಾಯಕ ಆದಿತ್ಯ ನಾರಾಯಣ್ ಕಾನ್ಸರ್ಟ್ ಒಂದರಲ್ಲಿ ಅಭಿಮಾನಿಯ ಫೋನ್ ಕಿತ್ತೆಸೆದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು.
ಈ ಬಗ್ಗೆ ಆದಿತ್ಯ ನಾರಾಯಣ್ ಮ್ಯಾನೇಜರ್ ಮಾತನಾಡಿದ್ದು, ಆದಿತ್ಯಗೆ ಆ ವ್ಯಕ್ತಿ ತೊಂದರೆ ಕೊಡುತ್ತಿದ್ದ ಎಂದು ಹೇಳಿದ್ದಾರೆ.
ಆತ ಕಾಲೇಜು ಯುವಕ ಅಲ್ಲ, ಆದಿತ್ಯ ರ್ಯಾಂಪ್ ಮೇಲೆ ಮುಂದೆ ಬಂದಾಗಲೆಲ್ಲ ಆತ ಆದಿತ್ಯ ಕಾಲಿಗೆ ಫೋನ್ನಲ್ಲಿ ಹೊಡೆಯುತ್ತಿದ್ದ. ಒಂದೆರಡು ಬಾರಿ ಆದಿತ್ಯ ಮಿಸ್ ಆಗಿ ಆಗಿರಬಹುದು ಎಂದು ಸುಮ್ಮನಿದ್ದರು. ಆದರೆ ಆತ ಬೇಕಂತಲೇ ಪ್ಯಾಂಟ್ ಎಳೆಯಲು ಪ್ರಯತ್ನಿಸುವುದು, ಫೋನ್ನಿಂದ ಕಾಲೆಗೆ ಹೊಡೆಯುವುದು ಮಾಡುತ್ತಿದ್ದ ಎಂದಿದ್ದಾರೆ.