Thursday, August 18, 2022

Latest Posts

ಚಿತ್ರದುರ್ಗದ ಆಗಸದಲ್ಲಿ ಚಾಲಕ ರಹಿತ ವಿಮಾನ: ಅಚ್ಚರಿ ಮೂಡಿಸಿತು ವಿದ್ಯಮಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರದುರ್ಗ ಜಿಲ್ಲೆಯಲ್ಲಿ ಚಾಲಕ ರಹಿತ ವಿಮಾನ ಯಶಸ್ವಿಯಾಗಿ ಹಾರಾಟ ನಡೆಸುವ ಮೂಲಕ ಹೊಸ ದಾಖಲೆ ಬರೆದಿದೆ.
ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ ಡಿಆರ್‌ಡಿಒ ಅಟಾನಮಸ್ ಫ್ಲೈಯಿಂಗ್ ವಿಂಗ್ ಟೆಕ್ನಾಲಜಿ ಡೆಮಾನ್‌ಸ್ಟ್ರೇಟರ್ ಮೊಟ್ಟಮೊದಲ ಚಾಲಕ ರಹಿತ ವಿಮಾನದ ಯಶಸ್ವಿ ಹಾರಾಟ ನಡೆಸಿದ್ದು, ಈ ಪರೀಕ್ಷಾ ಹಾರಾಟ ಯಶಸ್ವಿಯಾಗಿದೆ ಎಂದು  ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ತಿಳಿಸಿದೆ.

ಈ ಚಾಲಕ ರಹಿತ ವಿಮಾನವು ಟೇಕ್-ಆಫ್, ವೇ ಪಾಯಿಂಟ್ ನ್ಯಾವಿಗೇಷನ್ ಮತ್ತು ಸರಳವಾದ ಟಚ್‌ಡೌನ್‌ಗಳನ್ನು ಯಶಸ್ವಿಯಾಗಿ ಪೂರೈಸಿದ್ದು ವಿಮಾನವನ್ನು  ಡಿಆರ್‌ಡಿಒ ಅಡಿಯಲ್ಲಿನ ಪ್ರಮುಖ ಸಂಶೋಧನಾ ಪ್ರಯೋಗಾಲಯವಾದ ಬೆಂಗಳೂರು ಮೂಲದ ಏರೋನಾಟಿಕಲ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದೆ.
ಈ ವಿಮಾನವು ಪುಟ್ಟ  ಟರ್ಬೋಫ್ಯಾನ್ ಎಂಜಿನ್ ಹೊಂದಿದ್ದು, ರಕ್ಷಣಾ ಕ್ಷೇತ್ರಕ್ಕೆ ಇನ್ನಷ್ಟು ಬಲ ತುಂಬುವ ವಿಶ್ವಾಸ ಮೂಡಿಸಿದೆ.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿ, ಚಿತ್ರದುರ್ಗದಲ್ಲಿ ಚಾಲಕ ರಹಿತ ವಿಮಾನ ಹಾರಾಟ ನಡೆಸಿದೆ. ಈ ಯಶಸ್ವಿ ಚೊಚ್ಚಲ ಹಾರಾಟ ಸ್ವಾಯತ್ತ ವಿಮಾನಗಳ ಕಡೆಗೆ ಒಂದು ಪ್ರಮುಖ ಸಾಧನೆಯಾಗಿದೆ. ಇದು ನಿರ್ಣಾಯಕ ಮಿಲಿಟರಿ ವ್ಯವಸ್ಥೆಗಳ ವಿಷಯದಲ್ಲಿ ಆತ್ಮನಿರ್ಭರ್ ಭಾರತಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಬರೆದುಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!