ಹಾವೇರಿಯಲ್ಲಿ ಚಾಲಕರಿಗೂ ಮತದಾನಕ್ಕೆ ಅವಕಾಶ: ಡಿಸಿ

ದಿಗಂತ ವರದಿ ಹಾವೇರಿ:

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮಂಗಳವಾರ ಚುನಾವಣೆ ನಡೆಯಲಿದೆ. ಪ್ರಜಾಪ್ರಭುತ್ವದ ಈ ಹಬ್ಬದ ಯಶಸ್ವಿಗೆ ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಟೊಂಕ ಕಟ್ಟಿ ನಿಂತಿವೆ.

ಪ್ರಸಕ್ತ ಚುನಾವಣೆಯಲ್ಲಿ ಅಗತ್ಯವಾದ ವಾಹನಗಳ ಬಳಕೆಗಾಗಿ ಹಲವಾರು ಖಾಸಗಿ ವಾಹನಗಳನ್ನು ಸಹ ಜಿಲ್ಲಾಡಳಿತ ಬಳಸಿಕೊಳ್ಳಲು ಮುಂದಾಗಿದೆ. ಈ ವಾಹನಗಳಿಗೆ ಖಾಸಗಿ ಚಾಲಕರ ಸೇವೆ ಪಡೆದುಕೊಳ್ಳುತ್ತಿದೆ.

ಈ ಖಾಸಗಿ ಚಾಲಕರೂ ಸಹ ಮತದಾನದ ಹಬ್ಬದ ಸಂಭ್ರಮದ ಲ್ಲಿ ಪಾಲ್ಗೊಳ್ಳಲು ಅನುವಾಗುವಂತೆ ಈ ಖಾಸಗಿ ಚಾಲಕರಿಗೂ ಸಹ ಮತದಾನಕ್ಕೆ ಇದೇ ಮೇ 7ರಂದು ಅವಕಾಶ ಮಾಡಿಕೊಟ್ಟಿದ್ದಾಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ ರಘುನಂದನಮೂರ್ತಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!