ಮಾಸ್ಕೊ ಮೇಲೆ ಡ್ರೋನ್‌ ದಾಳಿ ನಡೆಸಿದ ಉಕ್ರೇನ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾ ರಾಜಧಾನಿ ಮಾಸ್ಕೊ ಮೇಲೆ ಉಕ್ರೇನ್‌ ಪಡೆಗಳು 34 ಡ್ರೋನ್‌ಗಳನ್ನು ಬಳಸಿ ಭಾನುವಾರ ದಾಳಿ ನಡೆಸಿದೆ .

ದಾಳಿಯ ಪರಿಣಾಮವಾಗಿ, ಮಾಸ್ಕೊದ ಮೂರು ಪ್ರಮುಖ ವಿಮಾನ ನಿಲ್ದಾಣಗಳಿಂದ ವಿಮಾನ ಸಂಚಾರವನ್ನು ಬೇರೆಡೆ ತಿರುಗಿಸಲಾಗಿತ್ತು.ದಾಳಿಯಲ್ಲಿ ಒಬ್ಬ ವ್ಯಕ್ತಿಗೆ ಗಾಯಗಳಾಗಿವೆ.

ರಷ್ಯಾದ ರಕ್ಷಣಾ ವ್ಯವಸ್ಥೆಯು ದೇಶದ ಪಶ್ಚಿಮ ಭಾಗದ ಇತರ ಪ್ರದೇಶಗಳ ಮೇಲೆ ಭಾನುವಾರ ನಡೆದ ದಾಳಿಯ ಭಾಗವಾಗಿದ್ದ 36 ಡ್ರೋನ್‌ಗಳನ್ನು ಹೊಡೆದುರುಳಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಉಕ್ರೇನ್‌ ಆಡಳಿತವು ವಿಮಾನ ಮಾದರಿಯ ಡ್ರೋನ್‌ಗಳನ್ನು ಬಳಸಿ ಭಯೋತ್ಪಾದಕ ದಾಳಿ ಎಸಗಲು ನಡೆಸಿದ ಯತ್ನವನ್ನು ವಿಫಲಗೊಳಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ. ಮಾಸ್ಕೊ ಮತ್ತು ಅದರ ಅಕ್ಕಪಕ್ಕದ ಪ್ರದೇಶಗಳ ಒಟ್ಟು ಜನಸಂಖ್ಯೆ 2.1 ಕೋಟಿಯಷ್ಟಿದೆ.

ರಷ್ಯಾ ಕಡೆಯಿಂದ 145 ಡ್ರೋನ್‌ಗಳನ್ನು ಬಳಸಿ ತನ್ನ ಮೇಲೆ ದಾಳಿ ನಡೆಸಲಾಗಿದೆ ಎಂದು ಉಕ್ರೇನ್ ಹೇಳಿದೆ. ಅಲ್ಲದೆ, ದೇಶದ ವಾಯು ರಕ್ಷಣಾ ವ್ಯವಸ್ಥೆಯು 62 ಡ್ರೋನ್‌ಗಳನ್ನು ಹೊಡೆದುರುಳಿಸಿದೆ ಎಂದೂ ತಿಳಿಸಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!