ಡ್ರೋನ್ ಡ್ರಾಪಿಂಗ್: ಐಇಡಿ, ಪಿಸ್ತೂಲ್‍, 5 ಲಕ್ಷ ರೂ. ನಗದನ್ನು ವಶಪಡಿಸಿಕೊಂಡ ಪೊಲೀಸರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಗಡಿಯಲ್ಲಿ ಡ್ರೋನ್ ನಿಂದ ಸುಧಾರಿತ ಸ್ಫೋಟಕ ಸಾಧನಗಳು (ಐಇಡಿಗಳು), ಪಿಸ್ತೂಲ್ಗಳು ಮತ್ತು ನಗದನ್ನು ಬಿಳಿಸಲಾಗಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಗಡಿಯಿಂದಐದಾರು ಕಿಲೋಮೀಟರ್ ದೂರದಲ್ಲಿರುವ ರಾಮಗಢ ಮತ್ತು ವಿಜಯಪುರದ ನಡುವೆ ಬೆಳಿಗ್ಗೆ 6.15 ರ ಸುಮಾರಿಗೆ ಸ್ಥಳೀಯ ಜನರು ಡ್ರೋನ್ ಮೂಲಕ ಸರಕು ರವಾನೆ ಮಾಡುತ್ತಿರುವುದನ್ನು ನೋಡಿದ್ದಾರೆ ಮತ್ತು ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ ಅಭಿಷೇಕ್ ಮಹಾಜನ್ ತಿಳಿಸಿದರು.

ಡಿಟೋನೇಟರ್ಗಳೊಂದಿಗೆ ಜೋಡಿಸದ ಎರಡು ಐಇಡಿಗಳು, ಎರಡು ಚೈನೀಸ್ ಪಿಸ್ತೂಲ್ಗಳು, 60 ರೌಂಡ್ಗಳ 4 ಮ್ಯಾಗಜೀನ್ಗಳು ಮತ್ತು 500 ರೂ. ಮುಖಬೆಲೆಯ 5 ಲಕ್ಷ ರೂ. ನಗದನ್ನು ಬಾಂಬ್ ನಿಷ್ಕ್ರಿಯ ದಳವು ವಶಪಡಿಸಿಕೊಂಡಿದೆ ಎಂದು ತಿಳಿಸಿದ್ದಾರೆ.

ಇದು ಗಡಿಯಾಚೆಗಿನ ಡ್ರೋನ್ ಡ್ರಾಪಿಂಗ್ ಪ್ರಕರಣವಾಗಿದ್ದು, ಈ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಎಸ್ಎಸ್ಪಿ ಹೇಳಿದರು. ‘ಯಾವುದಾದರೂ ಅಹಿತಕರ ಘಟನೆಗೆ ಇವುಗಳನ್ನು ಬಳಸುವ ಯೋಜನೆ ಹೊಂದಿತ್ತು. ಆದರೆ, ಆ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ. ಪೊಲೀಸ್ ತಂಡ ಮತ್ತು ಸ್ಥಳೀಯ ಜನರಿಗೆ ಬಹುಮಾನ ನೀಡಲಾಗುವುದು ಎಂದು ಹೇಳಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!