Wednesday, December 6, 2023

Latest Posts

ಜಾಮಾ ಮಸೀದಿಯಲ್ಲಿ ಮುಸ್ಲಿಂ ಮಹಿಳೆಯರಿಗಿಲ್ಲ ಪ್ರವೇಶ: ಆಡಳಿತ ಮಂಡಳಿ ಆದೇಶ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೆಹಲಿಯ ಜಾಮಾ ಮಸೀದಿಯಲ್ಲಿ ‘ಹುಡುಗಿಯರು/ಮಹಿಳೆಯರು ಗುಂಪಾಗಿಯಾಗಲೀ, ಒಬ್ಬಂಟಿಯಾಗಿ ಆಗಲೀ ಪ್ರವೇಶಿಸುವಂತಿಲ್ಲ’ ಎಂದು ಮೂರು ಪ್ರವೇಶ ದ್ವಾರಗಳಲ್ಲಿ ದೊಡ್ಡದಾಗಿ ಬರೆದ ಫಲಕಗಳನ್ನು ಹಾಕಲಾಗಿದೆ. ಈ ಮೂಲಕ ಇನ್ನು ಹುಡುಗಿಯರು ಗುಂಪಾಗಿ ಮತ್ತು ಏಕಾಂಗಿಯಾಗಿ ಹೋಗುವುದನ್ನು ನಿರ್ಬಂಧಿಸಲಾಗಿದೆ.
ಇದೀಗ ಈ ಅದೇಶಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಜಾಮಾ ಮಸೀದಿಯ ಆಡಳಿತ ಮಂಡಳಿಯ ಆದೇಶ ನೀಡಿದ್ದು, ಇಷ್ಟು ದಿನ ಜಾಮಾ ಮಸೀದಿಗೆ ಮಹಿಳೆಯರಷ್ಟೇ ಗುಂಪಾಗಿ ಹೋಗಬಹುದಿತ್ತು. ಇದೊಂದು ಪ್ರವಾಸಿ ಸ್ಥಳವಾಗಿದ್ದು, ಆಗಮಿಸುವ ಪ್ರವಾಸಿಗರೂ ಕೂಡ ಮಸೀದಿ ಪ್ರವೇಶ ಮಾಡಬಹುದಿತ್ತು. ಆದರೆ ಇನ್ನು ಮುಂದೆ ಮಹಿಳೆಯರಷ್ಟೇ ಗುಂಪುಗುಂಪಾಗಿ ಹೋಗಲು ಸಾಧ್ಯವಿಲ್ಲ. ಯಾವುದೇ ಹುಡುಗಿ/ಮಹಿಳೆ ಏಕಾಂಗಿಯಾಗಲೂ ಹೋಗುವಂತಿಲ್ಲ. ಹಾಗಂತ ಮಹಿಳೆಯರಿಗೆ ಪ್ರವೇಶವೇ ಇಲ್ಲ ಎಂತಲೂ ಅಲ್ಲ. ಅವರು ತಮ್ಮ ಪತಿಯೊಂದಿಗೋ, ಸಹೋದರ/ ತಂದೆ/ ಇನ್ನಿತರ ಕುಟುಂಬ ಸದಸ್ಯರ ಜತೆ ಮಸೀದಿಯೊಳಕ್ಕೆ ಹೋಗಬಹುದು ಎಂದು ತಿಳಿಸಿದೆ.

ಮುಸ್ಲಿಂ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಇಡೀ ವಿಶ್ವದಾದ್ಯಂತ ಹೋರಾಡುತ್ತಿದ್ದಾರೆ. ಅಂಥ ಹೊತ್ತಲ್ಲೇ ದೆಹಲಿ ಜಾಮಾ ಮಸೀದಿ ಆಡಳಿತ ಮಂಡಳಿ ಇಂಥ ಸೂಚನಾ ಫಲಕ ಹಾಕಿದ್ದು ತೀವ್ರ ಟೀಕೆಗೆ ಗುರಿಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!