ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಡ್ರೋನ್ ಹಾರಾಟ, ತನಿಖೆ ಆರಂಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ನಲ್ಲಿ ಅನಾಮಿಕ ಡ್ರೋನ್ ಹಾರಾಟ ನಡೆಸಿದೆ. ಈ ಕುರಿತು ಸಂದೇಹಗಳು ಮೂಡಿದ್ದು, ತನಿಖೆ ಆರಂಭಗೊಂಡಿದೆ.

ಇಂದು ಬೆಳಗ್ಗೆ ಏರ್ ಪೋರ್ಟ್‌ನಲ್ಲಿ ಟೇಕ್‌ ಆಫ್‌ ಸ್ಥಳದಿಂದ 6 ನಾಟಿಕಲ್ ಮೈಲ್ ದೂರದಲ್ಲಿ ಡ್ರೋನ್‌ ಹಾರಾಟ ಕಂಡುಬಂದಿದೆ. ಇದನ್ನು ಗಮನಿಸಿದ ಪೈಲೆಟ್ ಎಟಿಸಿ ಕಂಟ್ರೋಲ್​ಗೆ‌ ಮಾಹಿತಿ ನೀಡಿದ್ದಾರೆ.

ಅನಾಮಿಕ ಡ್ರೋನ್ ಹಾರಾಟದ ಬಗ್ಗೆ ಏರ್ಪೋಟ್ ಸಿಬ್ಬಂದಿ ಪೊಲೀಸರಿಗೆ ದೂರು‌ ನೀಡಿದ್ದು,
ಕೂಡಲೇ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!